ನೀಲೇಶ್ವರ ನಗರಸಭಾ ಅಧ್ಯಕ್ಷೆಯ ಪತಿಯ ಮೃತದೇಹ ತೇಜಸ್ವಿನಿ ಹೊಳೆಯಲ್ಲಿ ಪತ್ತೆ
ಹೊಸದುರ್ಗ: ನೀಲೇಶ್ವರ ನಗರಸಭಾಧ್ಯಕ್ಷೆ ಟಿ.ವಿ. ಶಾಂತಾರ ಪತಿ ಪೋಡೋ ತುರುತ್ತಿ ನಿವಾಸಿ ಪುಳುಕ್ಕುಲ್ ಕುಂಞಿಕಣ್ಣನ್ (72)ರನ್ನು ತೇಜಸ್ವಿನಿ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ನಿನ್ನೆ ರಾತ್ರಿ ೮.೪೫ರ ವೇಳೆ ಪರಿಸರ ನಿವಾಸಿಗಳು ಮನೆ ಸಮೀಪದಲ್ಲಿರುವ ತೇಜಸ್ವಿನಿ ಹೊಳೆಯಲ್ಲಿ ಇವರು ಬಿದ್ದಿರುವುದನ್ನು ಪತ್ತೆಹಚ್ಚಿದ್ದಾರೆ. ಕೂಡಲೇ ದಡಕ್ಕೆ ತಲುಪಿಸಿ ತೇಜಸ್ವಿನಿ ಆಸ್ಪತ್ರೆಗೆ ಕೊಂಡುಹೋಗಲಾಯಿತು. ಆ ವೇಳೆಗೆ ಅವರು ಮೃತಪಟ್ಟಿರುವುದಾಗಿ ಡಾಕ್ಟರ್‌ಗಳು ತಿಳಿಸಿದ್ದಾರೆ. ಘಟನೆಯಲ್ಲಿ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತರು ಪತ್ನಿ, ಮಕ್ಕಳಾದ ಟಿ.ವಿ. ಸುರೇಶ್, ಟಿ.ವಿ. ದಿಲೀಪ್, ಟಿ.ವಿ. ರೂಪೇಶ್, ಸೊಸೆಯಂದಿರಾದ ಅತುಲ್ಯ, ನಿಶಿತಾ, ಅರ್ಚನ, ಸಹೋದರಿ ಪಿ. ನಾರಾಯಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.