ನುಳ್ಳಿಪ್ಪಾಡಿಯಲ್ಲಿ ಕಾಡೆಮ್ಮೆ ಪತ್ತೆ

ಕಾಸರಗೋಡು: ನಗರದ ನುಳ್ಳಿಪ್ಪಾಡಿ ಎಂ.ಎ. ರಸ್ತೆಯಲ್ಲಿ ಮೊನ್ನೆ ರಾತ್ರಿ ಕಾಡೆಮ್ಮೆ ಗೋಚರಿಸಿದೆ. ಮೊನ್ನೆ ರಾತ್ರಿ ಸುಮಾರು ೮.೩೦ರ ವೇಳೆ ನುಳ್ಳಿಪ್ಪಾಡಿಯ ಕನ್ನಡ ಭವನದ ಬಳಿ ಕಾಡೆಮ್ಮೆ ಮೊದಲು ಪತ್ತೆಯಾಗಿದ್ದು, ಬಳಿಕ ಅದು ನೇತಾಜಿ ರೆಸಿಡೆನ್ಶಿಯಲ್ ಕಾಲನಿ ಬಳಿಯಲ್ಲೂ ಪತ್ತೆಯಾಗಿದೆ. ನಂತರ ಅದು ರಾಷ್ಟ್ರೀಯಹೆದ್ದಾರಿಯತ್ತ ಸಾಗಿ ಬಳಿಕ ಅಪ್ರತ್ಯಕ್ಷಗೊಂಡಿತ್ತೆಂದು ಈ ಪರಿಸರದವರು ತಿಳಿಸಿದ್ದಾರೆ.

You cannot copy contents of this page