ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆ
ಹೊಸದುರ್ಗ: ಗೃಹಿಣಿ ಮನೆ ಸಮೀಪದ ಶೆಡ್‌ನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಿನಾನೂರು ಕರಿಂದಳಂ ಪಂಚಾಯತ್‌ನ ನರಿಮಾಳಂ ಕಾರಿಮೂಲೆ ನಿವಾಸಿ ಕೆ. ಲೀಲಾ (56) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ಇವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೀಲೇಶ್ವರ ಪೊಲೀಸರು ತಲುಪಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದಿನೇಶ್ ಬೀಡಿ ಕಂಪೆನಿ ಕಾರ್ಮಿಕೆಯಾಗಿದ್ದರು. ದಿ| ಪಿ.ಪಿ. ರಾಮಚಂದ್ರನ್ ಪತಿಯಾಗಿದ್ದು, ಮೃತರು ಮಕ್ಕಳಾದ ಅಖಿಲ್, ಅತುಲ್, ಸೊಸೆ ನಯನ, ಸಹೋದರಿ ರತ್ನಾವತಿ, ಸಹೋದರರಾದ ನಾರಾಯಣನ್, ಸುಧಾಕರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.