ನೇಪಾಳ, ತೈವಾನ್‌ನಲ್ಲಿ ಪ್ರಬಲ ಭೂಕಂಪ
ಕಾಠ್ಮಂಡು: ನೇಪಾಳ ಮತ್ತು ತೈವಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ನೇಪಾಳದ ಕಾಠ್ಮಂಡು ನಲ್ಲಿ ಇಂದು ಮುಂಜಾನೆ ೪.೧೭ಕ್ಕೆ ರಿಕ್ಟರ್ ಮಾಪಕದಲ್ಲಿ ೪.೧ ತೀವ್ರ ತೆಯ ಭೂಕಂಪ ಸಂಭವಿಸಿz ಯೆಂದು ರಾಷ್ಟ್ರೀಯ ಭೂಕಂಪ ಶಾಸ್ತ್ರಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ನೇಪಾಳದಲ್ಲಿ ೨೪ ಗಂಟೆಯಲ್ಲಿ ನಡೆದ ಎರಡನೇ ಭೂಕಂಪವಾಗಿದೆ ಇದು. ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೇ ಆಸ್ತಿ ಹಾನಿ ಅಥವಾ ಸಾವುನೋವು ಇಲ್ಲಿ ತನಕ ವರದಿಯಾಗಿಲ್ಲ. ಇದೇ ರೀತಿ ತೈವಾನ್‌ನಲ್ಲೂ ಇಂದು ಬೆಳಿಗ್ಗೆ ೪.೩೫ಕ್ಕೆ ೫.೬ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಮಿಯ ಮೇಲ್ಮೈಯಿಂದ ೩೮ ಕಿ.ಮೀ. ಆಳದಲ್ಲಿ ಈ ಭೂಕಂಪ ಸಂಭವಿಸಿದೆ.
ಭೂಕಂಪದ ಸಮಯದಲ್ಲಿ ತೈವಾನ್‌ನ ಕಟ್ಟಡಗಳು ಅಲುಗಾಡಲಾರಂಭಿಸಿದ್ದವು. ಆದರೆ ಯಾವುದೇ ರೀತಿಯ ಸಾವುನೋವು, ನಾಶನಷ್ಟದ ಬಗ್ಗೆ ಈತನಕ ವರದಿಯಾಗಿಲ್ಲ. ಭ ಕಂಪ ಕೇಂದ್ರ ಬಿಂದು ದ್ವೀಪದ ಪೂರ್ವ ಕರಾವಳಿ ಸಮುದ್ರದಲ್ಲಿದೆ ಎಂದು ತೈವಾನ್ ಕೇಂದ್ರ ಹವಾಮಾನ ವರದಿ ತಿಳಿಸಿದೆ.