ನೇಶನಲ್ ವಿಶ್ವಕರ್ಮ ಫೆಡರೇಶನ್ ಪದಾಧಿಕಾರಿಗಳು

ಕಾಸರಗೋಡು: ನೇಶನಲ್ ವಿಶ್ವಕರ್ಮ ಫೆಡರೇಶನ್ ರಾಜ್ಯ ಸಮ್ಮೇಳನ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ  ಶಶಿ ಪಗರರವರ ಅಧ್ಯಕ್ಷತೆಯಲ್ಲಿ ತೃಶೂರಿನಲ್ಲಿ ಜರಗಿತು. ರಾಷ್ಟ್ರೀಯ ಕಾರ್ಯದರ್ಶಿ ರಾಘವನ್ ಕೊಳತ್ತೂರು, ರಾಷ್ಟ್ರೀಯ ಕೋಶಾಧಿಕಾರಿ ರಾಘವನ್ ದೊಡ್ಡುವಯಲ್, ವಸಂತಿ ಜೆ. ಆಚಾರ್ಯ, ಸಿ.ವಿ. ಗೋಪಾಲ ಕೃಷ್ಣನ್ ಮಾತನಾಡಿದರು. ಸಮಿತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ. ಅಂಬಿ, ಕಾರ್ಯದರ್ಶಿಯಾಗಿ ಸಿ.ವಿ. ಗೋಪಾ ಲಕೃಷ್ಣನ್, ಕೋಶಾಧಿಕಾರಿಯಾಗಿ ಎನ್.ಸಿ. ರವೀಂದ್ರನ್, ಆರ್ಗನೈ ಸಿಂಗ್ ಕಾರ್ಯದರ್ಶಿಯಾಗಿ ಸಂತೋಷ್ ಕಲ್ಲೂರ್, ಉಪಾಧ್ಯಕ್ಷರಾಗಿ ಸುಮೇಶ್ ವಲ್ಲಚ್ಚಿರ, ಜತೆ ಕಾರ್ಯದರ್ಶಿಯಾಗಿ ಕೆ.ಎಂ. ಗೀತಾ, ನಿಶಾ ಚಂದ್ರನ್‌ರನ್ನು ಆಯ್ಕೆ ಮಾಡಲಾಯಿತು.

You cannot copy contents of this page