ಮಲಗುವ ಕೊಠಡಿಯಲ್ಲಿ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಬೇಕಲ ಕೋಟಿಕುಳಂ ಕೋಟಪ್ಪಾರದಲ್ಲಿ  ಮನೆಯ ಮಲಗುವ ಕೊಠಡಿ ಯಲ್ಲಿ ನೇಣು ಬಿಗಿದ ಸ್ಥಿತಿ ಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮುಹಮ್ಮದ್ ಅನ್ಸಾಫ್ (30) ಮೃತಪಟ್ಟ ಯುವಕ. ನಿನ್ನೆ ಅಪರಾಹ್ನ 2.30ರಿಂದ ಸಂಜೆ 6.30ರ ಮಧ್ಯೆ ನೇಣು ಬಿಗಿದಿರ ಬೇಕೆಂದು ಶಂಕಿಸಲಾಗಿದೆ. ಆದರೆ ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. ಬೇಕಲ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page