ನೋಟ್ಸ್ ಬರೆಯದ ವಿದ್ಯಾರ್ಥಿನಿಗೆ ಹಲ್ಲೆಗೈದು ಕೈ ಎಲುಬು ಮುರಿದ ಅಧ್ಯಾಪಕ
ಹೊಸದುರ್ಗ: ನೋಟ್ಸ್ ಬರೆದು ಪೂರ್ತಿಗೊಳಿಸಿಲ್ಲವೆಂಬ ಕಾರಣಕ್ಕೆ ವಿದ್ಯಾರ್ಥಿನಿಗೆ ಹಲ್ಲೆಗೈದು ಕೈಯ ಎಲುಬು ಮುರಿದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಪರಿಯಾರಂ ಬಳಿಯ ಪಾಚೇನಿ ಸರಕಾರಿ ಶಾಲೆಯ ಅಧ್ಯಾಪಕ ಕೆ. ಮುರಳಿ ಎಂಬವರ ವಿರುದ್ಧ ಪರಿಯಾರಂ ಪೊಲೀಸರು ಜಾಮೀನುರಹಿತ ಕೇಸು ದಾಖಲಿಸಿದ್ದಾರೆ. ನಿನ್ನೆ ಬೆಳಿಗ್ಗೆ ೧೦ ಗಂಟೆ ವೇಳೆ ತರಗತಿಯಲ್ಲಿ ಘಟನೆ ನಡೆದಿರುವುದಾಗಿ ಹೇಳಲಾಗಿದೆ. ನೋಟ್ಸ್ ಪೂರ್ತಿಗೊಳಿಸಿಲ್ಲವೆಂಬ ಕಾರಣದಿಂದ ಎಂಟನೇ ತರಗತಿ ವಿದ್ಯಾರ್ಥಿನಿಗೆ ಅಧ್ಯಾಪಕ ಹೊಡೆದಿರುವುದಾಗಿ ದೂರಲಾಗಿದೆ. ಇದರಿಂದ ಕೈಯ ಎಲುಬಿಗೆ ಗಾಯ ಉಂಟಾಗಿದ್ದು, ಬಾತುಕೊಂಡಿತ್ತು. ಮಧ್ಯಾಹ್ನ ವೇಳೆ ಶಾಲಾ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಮನೆಯವರು ತಲುಪಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.