ನ್ಯಾಯಾಲಯದ ತೀರ್ಪು ಸತ್ಯಕ್ಕೆ ಸಂದ ಗೆಲುವು
ಮಂಜೇಶ್ವರ: ಬಿಜೆಪಿ ನಾಯಕರನ್ನು ಸುಳ್ಳು ಕೇಸುಗಳಲ್ಲಿ ಸಿಲುಕಿಸಿ ನಿರಂತರ ಷಡ್ಯಂತ್ರ ಮಾಡಿ ಬಿಜೆಪಿಯ ಸ್ಥೈರ್ಯ ಕುಗ್ಗಿಸಲು ಪ್ರಯತ್ನ ಮಾಡಿದ ಎಡರಂಗದ ಅಭ್ಯರ್ಥಿ ವಿ.ವಿ.ರಮೇಶ್ ಹಾಗೂ ಮಂಜೇಶ್ವರ ಐಕ್ಯರಂಗ ನೇತಾರರ ಮುಖಕ್ಕೆ ಬಿದ್ದ ಪೆಟ್ಟು ಕೋರ್ಟ್ ತೀರ್ಪು ಎಂದು ಬಿಜೆಪಿ ಮಂಜೇಶ್ವರ ಮಂಡಲ ಅದ್ಯಕ್ಷ ಆದರ್ಶ್ ಬಿ.ಎಂ. ಹೇಳಿದರು. ಮಂಜೇಶ್ವರ ಚುನಾವಣೆ ಯಲ್ಲಿ ಅಕ್ರಮ ನಡೆದಿದೆಯೆಂದು ಸುಳ್ಳು ಕೇಸು ದಾಖಲಿಸಿದ್ದ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಹಾಗೂ ಆರು ಮಂದಿ ನೇತಾರರನ್ನು ಕಾಸರಗೋಡು ಜಿಲ್ಲಾ ಸ್ಪೆಷಲ್ ನ್ಯಾಯಾಲಯ ದೋಷಮುಕ್ತಗೊ ಳಿಸಿದ್ದು, ತೀರ್ಪು ಸತ್ಯಕ್ಕೆ ಸಂದ ಹೆಲುವು ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಆದರ್ಶ್ ಬಿ.ಎಂ. ತಿಳಿಸಿದ್ದಾರೆ.