ಪಂಚಾಯತ್ ಸದಸ್ಯನಿಗೆ ಸಂದೇಶ ಕಳುಹಿಸಿದ ಬಳಿಕ ಪೋಕ್ಸೋ ಪ್ರಕರಣದ ಆರೋಪಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ:  ಪೋಕ್ಸೋ ಪ್ರಕರ ಣದಲ್ಲಿ ವಿಚಾರಣೆ  ಆರಂಭಗೊಳ್ಳಬೇ ಕಾದ ದಿನದಂದು ಆರೋಪಿ ಕಾಡಿ ನೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಅಡೂರು ಚಾಮೆಕೊಚ್ಚಿ ಮಲ್ಲಂಪಾರೆಯ ದಿನೇಶನ್ ಯಾನೆ ಗಣೇಶನ್ (೪೦)  ಚಾಮೆಕೊಚ್ಚಿ ಅರಣ್ಯದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ.  ಆದೂರು ಪೊಲೀಸರು ೨೦೨೨ರಲ್ಲಿ ದಾಖಲಿಸಿಕೊಂಡ ಪೋಕ್ಸೋ ಪ್ರಕರಣದಲ್ಲಿ ಗಣೇಶನ್ ಆರೋಪಿಯಾ ಗಿದ್ದರ. ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿದ್ದ ಇವರು ಇತ್ತೀಚೆಗೆ ಜಾಮೀನಿನಲ್ಲಿ ಬಿಡುಗಡೆ ಗೊಂಡಿದ್ದರು. ಈ ಪ್ರಕರಣದ ವಿಚಾರಣೆ ಕಾಸರಗೋಡು ಪೋಕ್ಸೋ ನ್ಯಾಯಾಲಯದಲ್ಲಿ ನಿನ್ನೆ ಆರಂಭಗೊಳ್ಳಬೇಕಿತ್ತು. ನ್ಯಾಯಾಲ ಯಕ್ಕೆ ಹೋಗುವುದಾಗಿ ತಿಳಿಸಿ ಮನೆ ಯಿಂದ ಹೊರಟ ಗಣೇಶನ್ ಅಲ್ಲಿನ ಪಂಚಾಯತ್ ಸದಸ್ಯನಿಗೆ ಸಂದೇಶ ಕಳುಹಿಸಿದ ಬಳಿಕ  ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದಾರೆ. ತನ್ನನ್ನು ಹುಡುಕಿ ಚಾಮೆಕೊಚ್ಚಿ ಅರಣ್ಯಕ್ಕೆ ಬಂದರೆ ಸಾಕೆಂದು ಸಂದೇಶದಲ್ಲಿ ತಿಳಿಸಲಾಗಿತ್ತೆನ್ನ ಲಾಗಿದೆ. ಸಂದೇಶವನ್ನು ಕಂಡ ಪಂಚಾಯತ್ ಸದಸ್ಯ ನಾಗರಿಕರಾದ ಕೆಲವರನ್ನು ಸೇರಿಸಿ ಚಾಮೆಕೊಚ್ಚಿ ಅರಣ್ಯದಲ್ಲಿ ಹುಡುಕಾಡಿದಾಗ ಗಣೇಶನ್ ಮರದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದೂರು ಪೊಲೀಸರು ಕೇಸು ದಾಖಲಿಸಿ ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ದಿವಂಗತರಾದ  ಅಣ್ಣಯ್ಯ ನಾಯ್ಕ್-ಹೊನ್ನಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಬೇಬಿ, ಮಕ್ಕಳಾದ ಕಾವ್ಯ, ದಿವ್ಯ, ಕಾರ್ತಿಕ್, ಸಹೋದರ-ಸಹೋದರಿಯರಾದ ಸುಂದರ, ದೇವಕಿ, ಕಸ್ತೂರಿ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಚಂದ್ರನ್ ಈ ಹಿಂದೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

You cannot copy content of this page