ಪಂಜತೊಟ್ಟಿ ಶ್ರೀ ವಿಘ್ನೇಶ್ವರ ಭಜನಾ ಮಂದಿರ ಸಾನ್ನಿಧ್ಯ ಕಲಶೋತ್ಸವ: ಕೊಂಡೆವೂರು ಶ್ರೀಗಳಿಂದ ಆಶೀರ್ವಚನ

ಬಂದ್ಯೋಡು: ಇಲ್ಲಿಗೆ ಸಮೀಪದ ಪಂಜತೊಟ್ಟಿ ಶ್ರೀ ವಿಘ್ನೇಶ್ವರ ಭಜನಾ ಮಂದಿರದಲ್ಲಿ ನೂತನ ವಿಘ್ನೇಶ್ವರ ದೇವರ ಛಾಯಾ ಫಲಕ ಪ್ರತಿಷ್ಠೆ ಮತ್ತು ಸಾನ್ನಿಧ್ಯ ಕಲಶೋತ್ಸವದ ಪ್ರಯುಕ್ತ ನಿನ್ನೆ ಸಂಜೆ ಧಾರ್ಮಿಕ ಸಭೆ ನಡೆದಿದ್ದು, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ. ಗಿರಿಧರ ರಾವ್ ಎಂ.ಎಸ್ ಮಾಣಿಹಿತ್ಲು ಅಧ್ಯಕ್ಷತೆ ವಹಿಸಿದರು. ಆರ್.ಎಸ್.ಎಸ್ ಕಾರ್ಯಕರ್ತ ವೀರಪ್ಪ ಅಂಬಾರು ಧಾರ್ಮಿಕ ಉಪನ್ಯಾಸ ನೀಡಿದರು. ಉದ್ಯಮಿ ಸದಾಶಿವ ಶೆಟ್ಟಿ, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟಂ, ಶಶಿಕಲ ಸುವರ್ಣ, ಕವಿ, ರಾಧಾಕೃಷ್ಣ.ಕೆ ಉಳಿಯತ್ತಡ್ಕ, ಅಂಬಾರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ವಿಜಯ ಪಂಡಿತ್, ಡಾ.ಅಭಿಲಾಷ್ ಮಯ್ಯ, ಶಶಿಧರ ಮುಟ್ಟಂ, ಮಂದಿರದ ಪ್ರತಿಷ್ಠಾ ಸಮಿತಿಯ ಪದಾಧಿಕಾರಿಗಳಾದ ದಿವಾಕರ ಆಳ್ವ ಕೆಳಗಿನ ಮನೆ, ಎಂ.ಆರ್ ಕೊರಗಪ್ಪ ಶೆಟ್ಟಿ ಮೇಲಿನ ಮನೆ, ಮೌನೇಶ್ ಆಚಾರ್ಯ ಬೆಜ್ಜಂಗಡಿ, ಬಾಬು ಬಂದ್ಯೋಡು, ನಿವೃತ್ತ ಬ್ಯಾಂಕ್ ಉದ್ಯೋಗಿ ಸಂಜೀವ ಬಂದ್ಯೋಡು, ಸೀತಾರಾಮ ಪಂಜತೊಟ್ಟಿ, ಸುಜಾತ, ಮನೋಜ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಹಾಗೂ ಅಧ್ಯಾಪಕ ರಂಜಿತ್ ಎ.ಎಸ್ ಪೆರ್ಲ ಇವರನ್ನು ಸನ್ಮಾನಿಸಲಾಯಿತು.
ಆಶಿಕಾ ಪಂಜತೊಟ್ಟಿ ಬಳಗ ಪ್ರಾರ್ಥನೆ ಹಾಡಿದರು. ಅಶ್ವಿತ ಪಂಜತೊಟ್ಟಿ ಸ್ವಾಗತಿಸಿ, ಹರೀಶ್.ಸಿ ಪಂಜತೊಟ್ಟಿ ವಂದಿಸಿದರು. ರಾಮಚಂದ್ರ ಬಲ್ಲಾಳ್, ಶರತ್ ಬೇಕೂರು ನಿರೂಪಿಸಿದರು.

RELATED NEWS

You cannot copy contents of this page