ಪಂಪ್‌ಶೆಡ್ಡ್‌ನಿಂದ ಮೋಟಾರ್ ಪಂಪ್‌ನ ಬಿಡಿಭಾಗ ಕಳವು

ಮಂಜೇಶ್ವರ: ಕುಡಿಯುವ ನೀರು ಯೋಜನೆಯ ಪಂಪ್ ಶೆಡ್ಡ್‌ನಲ್ಲಿ ದುರಸ್ತಿಗೆ ಇರಿಸಿದ್ದ ಮೋಟಾರ್ ಪಂಪ್‌ನ ಬಿಡಿಭಾಗ ಕಳವುಗೈದ ಘಟನೆ ನಡೆದಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆನೆಕಲ್ಲು ಪಂಪ್‌ಶೆಡ್ಡ್‌ನಿಂದಈ ತಿಂಗಳ ೫ರಂದು ಕಳವು ಕೃತ್ಯ ನಡೆದಿದೆ. ಶೆಡ್ಡ್‌ನಲ್ಲಿ ಕೆಟ್ಟು ಹೋದ ಮೋಟಾರ್ ಪಂಪನ್ನು ದುರಸ್ತಿ ಗೊಳಿಸಲು  ಶೆಡ್ಡ್‌ನಲ್ಲಿರಿಸಲಾಗಿತ್ತು. ಈ ವೇಳೆ ಸಿಬ್ಬಂದಿ ಹೊರಗಡೆ ಹೋಗಿ ಮರಳಿ ಬಂದಾಗ ಬಿಡಿಭಾಗಗಳು ಕಳವು ಹೋಗಿರುವುದಾಗಿ ದೂರಲಾಗಿದೆ. ಈ ಸಂಬಂಧ ನೀರಾವರಿ ಇಲಾಖೆ ಅಧಿಕಾರಿ ವಿಜಯ ಕುಮಾರ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page