ಪತಿ ಮನೆಯಿಂದ ತಾಯಿಮನೆಗೆ ಹೋದ ಯುವತಿ ನಾಪತ್ತೆ
ಕಾಸರಗೋಡು: ಪತಿಯ ಮನೆಯಿಂದ ತವರು ಮನೆಗೆ ಹೋದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ವಲಿಯಪರಂಬ ಮಾಡಕ್ಕಾಲ್ ತೆಟ್ಟನ್ ಹೌಸ್‌ನ ಟಿ. ಲಾಲು ಎಂಬವರ ಪತ್ನಿ ಆದಿರ (22) ನಾಪತ್ತೆಯಾಗಿದ್ದಾಳೆನ್ನಲಾಗಿದೆ. ಸೋಮವಾರ ಮಧ್ಯಾಹ್ನ 12 ಗಂಟೆಗೆ ಆದಿರ ತಾಯಿ ಮನೆಗೆ ಹೋಗುವುದಾಗಿ ತಿಳಿಸಿ ಪತಿ ಮನೆಯಿಂದ ಹೋಗಿದ್ದಳು. ಆದರೆ ಮರಳಿ ತಲುಪಿಲ್ಲವೆಂದು ಲಾಲು ಚಂದೇರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.