ಪತ್ನಿಯೊಂದಿಗೆ ಅನೈತಿಕ ಸಂಬಂಧ ಶಂಕೆ: ಯುವಕನನ್ನು ಕೊಂದು ತುಂಡುಗಳಾಗಿ ಮಾಡಿ ಉಪೇಕ್ಷಿಸಿದ ಆರೋಪಿ ಕಸ್ಟಡಿಯಲ್ಲಿ
ಕಲ್ಪೆಟ್ಟ: ವಯನಾಡ್ ವೆಳ್ಳ ಮುಂಡದಲ್ಲಿ ಯುಪಿ ನಿವಾಸಿಯಾದ ಕಾರ್ಮಿಕನನ್ನು ಕೊಲೆಗೈದು ಮೃತದೇ ಹವನ್ನು ತುಂಡುಗಳಾಗಿ ಮಾಡಿ ಬ್ಯಾಗ್ ನಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಆರೋಪಿ ಹಾಗೂ ಅನ್ಯರಾಜ್ಯ ಕಾರ್ಮಿಕನಾದ ಯುವಕ ಸೆರೆಯಾಗಿ ದ್ದಾನೆ. ಯುಪಿ ನಿವಾಸಿ ಮುಜೀಬ್ ಕೊಲೆಗೀಡಾದ ಕಾರ್ಮಿಕ. ಪತ್ನಿ ಯೊಂದಿಗೆ ಅನೈತಿಕ ಸಂಬಂಧವಿದೆ ಎಂಬ ಶಂಕೆಯಲ್ಲಿ ಮೊಹಮ್ಮದ್ ಆರೀಫ್ ಎಂಬಾತ ಕೊಲೆ ನಡೆಸಿದ್ದಾನೆ.
ಈತ ಈಗ ಪೊಲೀಸರ ಕಸ್ಟಡಿ ಯಲ್ಲಿದ್ದಾನೆ. ನಿನ್ನೆ ಸಂಜೆ ಮೂಳಿತ್ತೋಡ್ ಸೇತುವೆ ಯಡಿಯಲ್ಲಿ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಮೃತದೇಹವನ್ನು ಬ್ಯಾಗ್‌ನಲ್ಲಿ ತುಂಬಿಸಿ ಉಪೇಕ್ಷಿ ಸಲಿ ರುವ ಯತ್ನದ ಮಧ್ಯೆ ಆಟೋ ಚಾಲ ಕನಿಗೆ ಶಂಕೆ ಮೂಡಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೊಂಡಾರ್ ನಾಡ್ ಠಾಣೆ ವ್ಯಾಪ್ತಿಯ ವೆಳ್ಳಿಲಾಡಿಯಲ್ಲಿ ಕೊಲೆ ಪ್ರಕರಣ ನಡೆದಿದೆ. ಮುಜೀಬ್‌ನನ್ನು ಕೊಲೆಗೈದ ಬಳಿಕ ಮೃತದೇಹವನ್ನು ತುಂಡುಗಳಾಗಿ ಮಾಡಿ ಬ್ಯಾಗ್‌ನಲ್ಲಿ ಹಾಕಿ ಉಪೇಕ್ಷಿ ಸಲಾಗಿತ್ತು. ಇನ್ನೋರ್ವ ಅನ್ಯರಾಜ್ಯ ಕಾರ್ಮಿಕನ ಆಟೋ ರಿಕ್ಷಾದಲ್ಲಿ ತುಂಬಿಸಿ ಮೂಳಿತ್ತೋಡ್ ಸೇತುವೆ ಸಮೀಪದಲ್ಲಿ ಉಪೇಕ್ಷಿಸಲಾಗಿದೆ.