ಪತ್ನಿಯ ಕುತ್ತಿಗೆ ಬಿಗಿದು ಕೊಲೆಗೈಯ್ಯಲೆತ್ನ: ಪತಿ ಬಂಧನ
ಕಾಸರಗೋಡು: ಪತ್ನಿಯ ಕುತ್ತಿಗೆ ಬಿಗಿದು ನರಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇಲ್ಪರಂಬ ಕಟ್ಟೆಕ್ಕಾಲ್‌ನ ಬಾಡಿಗೆ ಮನೆಯಲ್ಲಿ ವಾಸಿಸುವ ಹನೀಫ (40) ಎಂಬಾತನನ್ನು ಮೇಲ್ಪರಂಬ ಎಸ್‌ಐ ಕೆ. ವೇಲಾಯುಧನ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಈ ತಿಂಗಳ ೨೮ರಂದು ರಾತ್ರಿ ಪತ್ನಿ ಸೈಫುನ್ನೀಸ (38)ಳ ಕುತ್ತಿಗೆಯನ್ನು ಬಿಗಿದು ಹಲ್ಲೆಗೈದಿರುವುದಾಗಿ ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಲಾಗಿದೆ. ಪತಿಯ ಕಿರುಕುಳ ಸಹಿಸಲಾಗದೆ ಸ್ವಂತ ಮನೆಗೆ ತೆರಳಲು ಸಿದ್ಧವಾದ ಹಿನ್ನೆಲೆಯಲ್ಲಿ ಸೈಫುನ್ನೀಸಾಳ ಕುತ್ತಿಗೆ ಹಿಡಿದು ಗಾಯಗೊಳಿಸಿರುವುದಾಗಿ ಆರೋಪಿ ಸಲಾಗಿದೆ. ಪತಿಯ ಕಿರುಕುಳ ಬಗ್ಗೆ ಸೈಫುನ್ನೀಸ ಈ ಹಿಂದೆಯೂ ದೂರು ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.