ಪರವಾನಗಿರಹಿತ ಬಂದೂಕು ಸಹಿತ ಓರ್ವ ಸೆರೆ
ಕಾಸರಗೋಡು: ಪರವಾನಗಿ ಇಲ್ಲದೆ ವಶದಲ್ಲಿರಿಸಿದ ನಾಡ ಬಂದೂಕು ಸಹಿತ ಓರ್ವನನ್ನು ಬಂಧಿಸಲಾಗಿದೆ. ಅಂಬಲತ್ತರ ತಾಯನ್ನೂರು ಮೊಯಲಂ ಹೌಸ್ ನಿವಾಸಿ ಬಿ. ನಾರಾಯಣ (೪೯) ನನ್ನು ಬಂಧಿ ಸಲಾಗಿದೆ.
ಮರುದೋಂ ಸೆಕ್ಷನ್ ಫಾರೆಸ್ಟ್ ಅಧಿಕಾರಿ ಬಿ.ಎಸ್. ವಿನೋದ್ ಕುಮಾರ್ಗೆ ಲಭಿಸಿದ ರಹಸ್ಯ ಮಾಹಿತಿ ಆಧಾರದಲ್ಲಿ ಅಂಬಲತ್ತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆ. ಲತೀಶ್ ಹಾಗೂ ತಂಡ ಈತನನ್ನು ಸೆರೆ ಹಿಡಿದಿದೆ. ಪಾರಪಳ್ಳಿ ಒರಳಕ್ಕಾಡ್ ಎಂಬಲ್ಲಿನ ಸರ್ಫಾಸ್ ಎಂಬವರ ರಬ್ಬರ್ ತೋಟದ ಶೆಡ್ನಿಂದ ನಿನ್ನೆ ರಾತ್ರಿ ಬಂದೂಕನ್ನು ವಶಪಡಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.