ಪರ್ಫ್ಯೂಂ, ಖರ್ಜೂರ, ಜೀನ್ಸ್ನೊಳಗೆ ಬಚ್ಚಿಟ್ಟು ಚಿನ್ನ ಸಾಗಾಟ: ಕುಂಬಳೆ ನಿವಾಸಿ ಸಹಿತ ಇಬ್ಬರು ಕಸ್ಟಡಿಗೆ
ಕಲ್ಲಿಕೋಟೆ: ಜೀನ್ಸ್, ಖರ್ಜೂರ ಹಣ್ಣು ಹಾಗೂ ಪರ್ಫ್ಯೂಮ್ ಬಾಟ್ಲಿಗಳಲ್ಲ್ಲಿ ಚಿನ್ನ ಬಚ್ಚಿಟ್ಟು ತಂದ ಚಿನ್ನವನ್ನು ಕರಿಪ್ಪೂರ್ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಕಸ್ಟಂಸ್ ವಶಪಡಿಸಿಕೊಂ ಡಿದೆ. ಈ ಸಂಬಂಧ ಕುಂಬಳೆ ಹಾಗೂ ಓಮಶ್ಶೇರಿ ನಿವಾಸಿಗಳಾದ ಇಬ್ಬರನ್ನು ಕಸ್ಟಡಿಗೆ ತೆಗೆಯಲಾಗಿದೆ.
ದುಬಾಯಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಆಗಮಿಸಿದ ಕುಂಬಳೆ ನಿವಾಸಿ ಅಬ್ದುಲ್ ಲತೀಫ್ (೩೧), ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಮಸ್ಕತ್ ನಿಂದ ಆಗಮಿಸಿದ ಓಮಶ್ಶೇರಿ ನಿವಾಸಿ ಶರಫುದ್ದೀನ್ (೩೫) ಎಂಬಿವರ ಕೈಯಿಂದ ಚಿನ್ನ ವಶಪಡಿಸ ಲಾಗಿದೆ. ಕಸ್ಟಂಸ್ ಅಧಿಕಾರಿಗಳು ಅಬ್ದುಲ್ ಲತೀಫ್ನ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಆರು ಬಾಟ್ಲಿ ಪರ್ಫ್ಯೂಮ್ ಪತ್ತೆಯಾಗಿದೆ. ಅದರಲ್ಲಿದ್ದ ದ್ರಾವಣವನ್ನು ತಪಾಸಣೆಗೈದಾಗ ಅದು ಚಿನ್ನ ಮಿಶ್ರಿತ ದ್ರಾವಣವಾಗಿದೆ ಯೆಂದು ತಿಳಿದು ಬಂದಿದೆ. ದ್ರಾವಣವನ್ನು ಬೇರ್ಪಡಿಸಿದಾಗ ೮೩ ಗ್ರಾಂ ೨೪ ಕ್ಯಾರೆಟ್ ಶುದ್ಧ ಚಿನ್ನ ಪತ್ತೆಹಚ್ಚಲಾಗಿದೆ. ಈ ಚಿನ್ನಕ್ಕೆ ೯ ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಶರಾಫುದ್ದೀನ್ನ ಬ್ಯಾಗೇಜ್ ಪರಿಶೀಲಿಸಿದಾಗ ಅದರಲ್ಲಿ ಚಾಕ್ಲೆಟ್ ಪ್ಯಾಕೆಟ್ನೊಳಗೆ ಇರಿಸಿದ್ದ ಖರ್ಜೂರದೊಳಗೆ ಚಿನ್ನ ಬಚ್ಚಿಟ್ಟಿರುವುದು ಗಮನಕ್ಕೆ ಬಂದಿದೆ. ಹೀಗೆ ೨೦ ಚಿನ್ನದ ತುಂಡುಗಳನ್ನು ಖರ್ಜೂರದೊಳಗೆ ಬಚ್ಚಿಟ್ಟಿರುವುದು ಅದು ಒಟ್ಟು ೧೪೧ ಗ್ರಾಂ ಇದೆಯೆಂದು ತಿಳಿದು ಬಂದಿದೆ. ಮಾತ್ರವಲ್ಲ ಶರಫುದ್ದೀನ್ನ ದೇಹ ತಪಾಸಣೆ ನಡೆಸಿದಾಗ ಆತ ಧರಿಸಿದ್ದ ಜೀನ್ಸ್ನಲ್ಲಿ ೪೦೨ ಗ್ರಾಂ ಚಿನ್ನವನ್ನು ಅಂಟಿಸಿರುವುದು ಕಂಡು ಬಂದಿದೆ. ಈತನಿಂದ ವಶಪಡಿಸಿಕೊಂಡ ಚಿನ್ನಕ್ಕೆ ೩೪ ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ ಎಂದು ಕಸ್ಟಂಸ್ ಮೂಲಗಳು ತಿಳಿಸಿವೆ.