ಪಳ್ಳತ್ತಡ್ಕದಲ್ಲಿ ನಡೆಯಲಿರುವ ಪುರುಷೋತ್ತಮ ಯಾಗ ಯಶಸ್ಸಿಗೆ ಅಡೂರು ಕ್ಷೇತ್ರದಲ್ಲಿ ಪ್ರಾರ್ಥನೆ

ಬದಿಯಡ್ಕ: ಕುಂಬಳೆ ಸೀಮೆಯ ಪ್ರತೀ ಕುಟುಂಬದ ಸದಸ್ಯರಿಗೆ ಆರೋಗ್ಯ ವೃದ್ಧಿ ಕುಟುಂಬದ ಸಂಪತ್ತು ವೃದ್ಧಿ, ಮಕ್ಕಳ ವಿದ್ಯಾ ಬುದ್ಧಿ ಸಂಸ್ಕಾರ ವೃದ್ಧಿ, ಹಾಗೂ ಸೀಮೆಯ ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕಿ ಮಾದರಿ ಸೀಮೆಯನ್ನಾಗಿ ಮಾಡುವ ಉದ್ದೇಶ ದೊಂದಿಗೆ ಸೀಮೆಯ ಅಡೂರು, ಮಧೂರು, ಕಣಿಪುರ ಕ್ಷೇತ್ರದ ಎಲ್ಲಾ ದೇವರ ಅನುಗ್ರಹ, ನಾಲ್ಕು ದೈವಸ್ಥಾನ ಗಳ ದೈವಗಳ ಸರ್ವಾನುಗ್ರಹ ಪ್ರಾಪ್ತವಾಗಲಿ ರಾಮನಾಮ ಜಪ ಧನ್ವಂತರಿ ಪೂಜೆ ಪುರುಷೋತ್ತಮ ಯಾಗದಿಂದ ಸೀಮೆಯ ಎಲ್ಲರೂ ಪ್ರಭು ಶ್ರೀರಾಮಚಂದ್ರನAತೆ ಪುರು ಷೋತ್ತಮ ಗುಣವನ್ನು ಸಂಪಾದಿಸುವ ಶಕ್ತಿಯನ್ನು ಅನುಗ್ರಹಿಸಲಿ ಎಂದು
ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ದೇವಸ್ಥಾನದ ಅರ್ಚ ಕರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನ.19ರಂದು ಪಳ್ಳತ್ತಡ್ಕದಲ್ಲಿ ನಡೆಯಲಿರುವ ಪುರುಷೋತ್ತಮ ಯಾಗ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು, ಕಾರ್ಯದರ್ಶಿ ರಾಜನ್ ಮುಳಿಯಾರು, ಸುರೇಶ್ ಬಾಬು ಕಾನತ್ತೂರು, ದಾಮೋದರ ಮಣಿಯೂರು, ಮುರಳಿ ಪಾಂಡಿ ಹಾಗೂ ಭಕ್ತರು ಭಾಗವಹಿಸಿದರು.

RELATED NEWS

You cannot copy contents of this page