ಪಹಲ್ಗಾಮ್ ಕಾಸರಗೋಡಿನ ಪ್ರವಾಸಿ ತಂಡ ಸುರಕ್ಷಿತ
ಕಾಸರಗೋಡು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿ ಸ್ತಾನಿ ಉಗ್ರರು ನಡೆಸಿದ ದಾಳಿಯಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದ ನೀಚ ಕೃತ್ಯವನ್ನು ಇಡೀ ವಿಶ್ವ ಸಮೂಹವೇ ಖಂಡಿಸಿದೆ. ಈ ದಾಳಿ ನಡೆಯುವ ವೇಳೆ ಕಾಸರಗೋಡು ಜಿಲ್ಲೆಯಿಂದ ಪ್ರವಾಸಕ್ಕೆ ಹೋದ ಎರಡು ತಂಡ ಕಾಶ್ಮೀರದಲ್ಲಿತ್ತು. ಅವರೆಲ್ಲರೂ ಸುರಕ್ಷಿ ತರಾಗಿದ್ದಾರೆ. ಕುತ್ತಿಕ್ಕೋಲ್ ಸಮೀಪ ದ ಕಳ್ಳಾರು, ಮಾಲಕ್ಕಲ್ಲು ಮತ್ತು ಚುಳ್ಳಿಕ್ಕೆರೆಯಿಂದ 24 ಮಂದಿ ಒಳಗೊಂಡ ಪ್ರವಾಸಿ ತಂಡ ಹಾಗೂ ನೀಲೇಶ್ವರದಿಂದ ಪ್ರವಾಸಕ್ಕೆ ಹೋದ ೧೧ ಮಂದಿ ತಂಡ ಕಾಶ್ಮೀರದಲ್ಲಿ ಸುರ ಕ್ಷಿತರಾಗಿದ್ದಾರೆಂದು ಸಂಬಂಧ ಪಟ್ಟವರು ತಿಳಿಸಿದ್ದಾರೆ.