ಪಾಂಡಿಯಲ್ಲಿ ಕಾಡಾನೆಗಳ ಹಾವಳಿ: ವ್ಯಾಪಕ ಕೃಷಿ ನಾಶ

ಅಡೂರು: ಪಾಂಡಿಯಲ್ಲಿ ಕಾಡಾನೆಗಳು ನಡೆಸಿದ ದಾಳಿಯಿಂದ ವ್ಯಾಪಕ ಕೃಷಿನಾಶವುಂಟಾಗಿದೆ.  ಪಾಂಡಿಯ ಜನಾರ್ದನ ನಾಯ್ಕ, ತಲೆಮನೆಯ ಅಶೋಕ್ ನಾಯ್ಕ ಎಂಬಿವರ ತೋಟಗಳಿಗೆ ಕಾಡಾನೆ ನುಗ್ಗಿದೆ. ತೆಂಗು, ಬಾಳೆ ಮೊದಲಾದ ಕೃಷಿಯನ್ನು ಆನೆ ನಾಶಗೊಳಿಸಿದ್ದು, ಭಾರೀ ನಷ್ಟವುಂಟಾಗಿದೆ ಎಂದ ದೂರಲಾಗಿದೆ.

ಈ ಹಿಂದೆ ಹಲವು ಬಾರಿ ಈ ಪ್ರದೇಶಕ್ಕೆ ಕಾಡಾನೆಗಳು ದಾಳಿ ನಡೆಸಿ ವ್ಯಾಪಕ ಕೃಷಿನಾಶಗೈದಿದ್ದವು. ಅನಂತರ ಅವುಗಳನ್ನು ಅರಣ್ಯಕ್ಕೆ ಅಟ್ಟಲಾಗಿತ್ತು. ಇನ್ನು ಮುಂದೆ ಆನೆಗಳ  ಹಾವಳಿ ಉಂಟಾಗದು ಎಂದು ಭಾವಿಸಿ ಕೃಷಿ ಬೆಳೆಸಲಾಗಿತ್ತು. ಆದರೆ ಇದೀಗ ಮತ್ತೆ ಉಂಟಾದ ಆನೆಯ ದಾಳಿಯಿಂದ ಆ ಕೃಷಿ ಕೂಡಾ ನಾಶವಾಗಿದೆಯೆಂದು ಕೃಷಿಕರು ದೂರುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page