ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್ ಭಯೋತ್ಪಾದಕನಿಗೆ ಗುಂಡಿಕ್ಕಿ ಹತ್ಯೆ
ಶ್ರೀನಗರ: ಪಾಕಿಸ್ತಾನ ಅಕ್ರಮಿತ ಕಾಶ್ಮೀರದ ಕಾವಲ್ಕೋಟ್ನ ಆಲ್-ಖುದಸ್ ಮಸೀದಿಯೊಳಗೆ ಅಪರಿಚಿತ ಬಂದೂಕುಧಾರಿಗಳು ಲಷ್ಕರ್ ಎ ತೋಯ್ಬಾ (ಎಲ್ ಇಟಿ)ದ ಉನ್ನತ ಭಯೋತ್ಪಾದಕ ಕಮಾಂಡರ್ನನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಭಯೋತ್ಪಾದ ಕನನ್ನು ರಿಯಾಜ್ ಅಲಿಯಾಸ್ ಅಬು ಖಾಸಿಂ ಎಂದು ಗುರುತಿಸಲಾಗಿದೆ. ಈತ ನಮಾಜು ಮಾಡಲೆಂದು ಮಸೀದಿಗೆ ಬಂದಿದ್ದ ವೇಳೆ ಆತನ ತಲೆಗೆ ಪಾಂಯಿಟ್ ಬ್ಲಾಂಕ್ ರೇಂಜ್ನಲ್ಲಿ ಗುಂಡು ಹಾಕಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಜನವರಿ ೧ರಂದು ಧಂಗ್ರಿ ಭಯೋತ್ಪಾದಕ ದಾಳಿಯ ಹಿಂದಿನ ಪ್ರಧಾನ ಸೂತ್ರಧಾರ ಈತನಾಗಿದ್ದಾನೆಂದು ತಿಳಿಯಲಾಗಿದೆ.