ಪಾರೆಕಟ್ಟೆ ರೆಸಿಡೆನ್ಸ್ ಅಸೋಸಿಯೇಶನ್ ಓಣಂ ಹಬ್ಬಾಚರಣೆ
ವಿದ್ಯಾನಗರ: ಪಾರೆಕಟ್ಟೆ ರೆಸಿಡೆನ್ಸ್ ಅಸೋಸಿಯೇಶನ್‌ನ ಆಶ್ರಯದಲ್ಲಿ ಓಣಂ ಹಬ್ಬಾಚರಣೆ ಹಾಗೂ ವಾರ್ಷಿಕ ಆಚರಣೆ ಜರಗಿತು. ಕಾಸರಗೋಡು ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಚಂದ್ರಕುಮಾರ್ ಉದ್ಘಾಟಿಸಿದರು. ರೆಸಿಡೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎಂ. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಗೌರವಾಧ್ಯಕ್ಷ ಜಯ ಚಂದ್ರನ್ ಪ್ರಧಾನ ಭಾಷಣ ಮಾಡಿದರು. ವೈ.ಕೆ. ಗೋವಿಂದ ಭಟ್, ಡಾ| ಶೋಭಾ, ಗ್ರೇಸಿ ಜೋಸ್, ರೇಶ್ಮಾ ಪ್ರಶಾಂತ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಅನಿತಾ ನಾರಾಯಣನ್, ತನ್ವಿ ಕಿಶೋರ್ ಎಂಬಿವರನ್ನು ಗೌರವಿಸಲಾ ಯಿತು. ಕಾರ್ಯದರ್ಶಿ ಜುನೈದ್ ಅಬ್ದುಲ್ಲ ಸ್ವಾಗತಿಸಿ, ಕೆ.ಟಿ. ಕಿಶೋರ್ ವಂದಿಸಿದರು. ಬೆಳಿಗ್ಗೆ ಹೂವಿನ ರಂಗೋಲಿ ಸ್ಪರ್ಧೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮಧ್ಯಾಹ್ನ ಓಣಂ ಭೋಜನ ಏರ್ಪಡಿಸಲಾಗಿತ್ತು.ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾಞಂಗಾಡ್ ಚಿಲಂಬೊಲಿ ಜಾನಪದ ತಂಡದಿಂದ ಜಾನಪದ ಹಾಡು ಜರಗಿತು.