ಪಾರೆ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರ ಜೀರ್ಣೋದ್ಧಾರ ಚಟುವಟಿಕೆಗಳಿಗೆ ಚಾಲನೆ
ಕುಂಬಳೆ: ಆರಿಕ್ಕಾಡಿ ಶ್ರೀ ಭಗವತಿ ಆಲಿಚಾಮುಂಡಿ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಇದರಂಗವಾಗಿ ಈ ತಿಂಗಳ ೨೪ರಂದು ಬೆಳಿಗ್ಗೆ ೧೧ ಗಂಟೆಗೆ ಕ್ಷೇತ್ರದಲ್ಲಿ ವಿನಂತಿ ಪತ್ರ ಬಿಡುಗಡೆ ನಡೆಯಲಿದೆ. ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎಂ.ಆರ್. ಮುರಳಿ ಭಾಗವಹಿಸುವರು. ಜೀರ್ಣೋದ್ಧಾರ ಚಟುವಟಿಕೆಗಳಿಗಾಗಿ ಬ್ರಹ್ಮಶ್ರೀ ಕಲ್ಕುಳ ಬೂಡು ಶಂಕರನಾರಾಯಣ ಕಡಮಣ್ಣಾಯ ಗೌರವಾಧ್ಯಕ್ಷರಾಗಿ ಸಮಿತಿ ರೂಪೀಕರಿಸಲಾಗಿದೆ. ಶ್ರೀ ಕ್ಷೇತ್ರದ ಮೂಲ ಆಲಯ, ಸುತ್ತುಗೋಪುರ, ಭಂಡಾರಮನೆ, ನಾಗ ಸನ್ನಿಧಿ, ಆಲಿ ಚಾಮುಂಡಿ ದೈವದ ಅಭಯಸ್ಥಾನ, ಗುಳಿಗ ಕಟ್ಟೆ ಎಂಬಿವು ಸೇರಿದಂತೆ ನಾಲ್ಕು ಕೋಟಿ ರೂ.ಗಳ ನವೀಕರಣ ಚಟುವಟಿಕೆಗಳನ್ನು ನಡೆಸಲಾಗುವುದು. ೧೮೦೦ ವರ್ಷದ ಇತಿಹಾಸವಿರುವ ಕ್ಷೇತ್ರದಲ್ಲಿ ಪಾಡಾರ್ ಕುಳಂಗರ ಭಗವತಿ, ಪುದಿಯ ಭಗವತಿ, ವೀರಪುತ್ರನ್, ಮಲಯಾಂ ಚಾಮುಂಡಿ ಎಂಬಿವು ಪ್ರಧಾನ ದೈವ ಗಳಾಗಿವೆ. ಈ ಬಗ್ಗೆ ತಿಳಿಸಲು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಸುಕು ಮಾರ ಎಂ. ಕುಂಬಳೆ, ಅಶೋಕ ಎಂ. ಬಂಬ್ರಾಣ, ಟಿ.ಎಂ. ಸತ್ಯನಾರಾ ಯಣ, ಜಿ. ಸದಾಶಿವ, ಎಂ. ಕರುಣಾಕರ, ಕೆ. ಸಂತೋಷ್ ಕುಮಾರ್, ಬಿ. ಕೃಷ್ಣ ಮಾಸ್ತರ್, ಸಜಿತ್, ಸೌಮ್ಯ ಭಾಗವಹಿಸಿದರು.