ಪಿಂಚಣಿದಾರರನ್ನು ವಂಚಿಸುತ್ತಿರುವ ಕೇರಳ ಸರಕಾರ- ಬಿಜೆಪಿ

ಮಂಜೇಶ್ವರ: ಆರ್ಥಿಕ ಮುಗ್ಗಟ್ಟಿನಿಂದ ಕೇರಳದಲ್ಲಿ ಸರಕಾರ ನೀಡಬೇಕಾದ ಕ್ಷೇಮ ಪಿಂಚಣಿ, ಲೈಫ್ ಯೋಜನೆ, ಮನೆ ರಿಪೇರಿ ಯೋಜನೆಗಳು ಬುಡಮೇಲಾಗುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ. ವಿವಿಧ ಪಿಂಚಣಿಗಳನ್ನು ಆಗಸ್ಟ್ ತನಕ ಮಾತ್ರ ನೀಡಲಾಗಿದೆ. ಅದರಲ್ಲೂ ಜುಲೈ ತಿಂಗಳಲ್ಲಿ ಸಿಗದವರಿಗೆ ಆಗಸ್ಟ್‌ನಲ್ಲೂ ಪಿಂಚಣಿ ಹಣ ಬಂದಿಲ್ಲ. ಪಿಂಚಣಿದಾರರ ಮಸ್ಟರಿಂಗ್ ಡಿಸೆಂಬರ್‌ನಲ್ಲಿ ಮಾಡಲು ಆದೇಶ ನೀಡಿ, ಈಗ ಜುಲೈ ತಿಂಗಳಿನಿಂದ ಹಣ ಸಿಗದವರು ಪ್ರಶ್ನಿಸಿದರೆ ಮಸ್ಟರಿಂಗ್ ಆಗಿಲ್ಲ, ಆಧಾರ್ ನೀಡಿಲ್ಲ ಎಂದು ಹೇಳಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತಿಲ್ಲ. ಡಿಸೆಂಬರ್‌ನಲ್ಲಿ ಮಸ್ಟರಿಂಗ್, ಆಧಾರ್ ಸಂಗ್ರಹಣೆ ಮಾಡಿ ಜುಲೈ ಬಳಿಕದ ಹಣ ನೀಡದೆ ಸರಕಾರ ವಂಚಿಸುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಆರೋಪಿಸಿದರು.

ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಲು ೫೦ ವರ್ಷ ಪೂರ್ತಿ ಆಗಿರಬೇಕೆಂಬ ಅಲಿಖಿತ ಆದೇಶ ಜ್ಯಾರಿಯಲ್ಲಿದೆ. ೫೦ ವರ್ಷ ಪೂರ್ತಿ ಆಗದೆ ವಿಧವಾ ಪೆನ್ಶನ್ ಅರ್ಜಿ ಹಾಕಲು ಆಗುತ್ತಿಲ್ಲ ಎಂಬ ಕ್ರಮವನ್ನು ಬಿಜೆಪಿ  ಖಂಡಿಸಿದೆ. ಲೈಫ್ ಹೆಸರಲ್ಲಿ ಮೊದಲ ಕಂತು ಮಾತ್ರ ನೀಡಲಾ ಗಿದೆ. ಸರಕಾರದ ನೂತನ ಆದೇಶದ ಪ್ರಕಾರ ೧ ಲಕ್ಷಕ್ಕಿಂತ ಹೆಚ್ಚಿನ ಹಣ ಟ್ರಶರಿ ಆಫೀಸ್‌ನಿಂದ ಡ್ರಾ ಮಾಡಲು ಸಾಧ್ಯವಾಗದೆ ಸರಕಾರ ಬಡ ಜನತೆಯನ್ನು ವಂಚಿಸು ವುದನ್ನು ನಿಲ್ಲಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.

Leave a Reply

Your email address will not be published. Required fields are marked *

You cannot copy content of this page