ಪಿಕಪ್ ಚಾಲಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ನೀರ್ಚಾಲು: ಪಿಕಪ್ ಚಾಲಕರೊಬ್ಬರು ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೀರ್ಚಾಲು ಬಳಿಯ ಪೊಯ್ಯಕ್ಕಾಡ್‌ನ ಲಿಯೋ ಕ್ರಾಸ್ತ (52) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ 1.30ರ ವೇಳೆ ಇವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ. ಪೊಯ್ಯಕ್ಕಾಡ್‌ನ ದಿ| ಅಲ್ಬರ್ಟ್ ಕ್ರಾಸ್ತ- ಮೆಟಿಲ್ಡ ಡಿಸೋಜ ದಂಪತಿಯ ಪುತ್ರನಾದ ಮೃತರು ಪತ್ನಿ ಸಬೀನ ಡಿಸೋಜಾ (ಗಲ್ಫ್), ಮಕ್ಕಳಾದ ಸರೋಣ ಸ್ಟಾಲಿನ್, ಸಹೋದರ- ಸಹೋದರಿಯರಾದ ಸ್ಟಾನಿ ಕ್ರಾಸ್ತ, ತೋಮಸ್ ಕ್ರಾಸ್ತ, ಅಮ್ರಾಸ್ ಕ್ರಾಸ್ತ, ಪ್ರವೀಣ್ ಕ್ರಾಸ್ತ, ಅಲ್ಫೋನ್ಸ್ ಕ್ರಾಸ್ತ, ಅನಿತ ಕ್ರಾಸ್ತ, ಸುನಿತ ಕ್ರಾಸ್ತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page