ಪಿಕಪ್ ತಲೆಗೆ ಬಡಿದು ವೃದ್ಧ ಮೃತ್ಯು
ಕಾಸರಗೋಡು: ಕೋಳಿ ಗೊಬ್ಬರ ಇಳಿಸುವ ವೇಳೆ ಪಿಕಪ್ ವಾಹನ ತಲೆಗೆ ಬಡಿದು ವೃದ್ಧ ಸಾವನ್ನಪ್ಪಿದ ಘಟನೆ ನಡೆದಿದೆ.
ಉದುಮ ಮಾಂಙಾಡ್ ತಾಮರಕುಳ ರಸ್ತೆ ಬಳಿಯ ಎಂ. ಮುಹಮ್ಮದ್ (78) ಸಾವನ್ನಪ್ಪಿದ ವ್ಯಕ್ತಿ. ನಿನ್ನೆ ಪೆರುಂಬಳ ಬೇವೂರಿನಲ್ಲಿ ಘಟನೆ ನಡೆದಿದೆ. ಪಿಕಪ್ ವಾಹನದಲ್ಲಿ ತಂದ ಕೋಳಿ ಗೊಬ್ಬರ ಒಳಗೊಂಡ ಗೋಣಿ ಚೀಲಗಳನ್ನು ಇಳಿಸುತ್ತಿದ್ದ ವೇಳೆ ಮುಹಮ್ಮದ್‌ರ ಕಾಲು ಜಾರಿ ಅವರ ತಲೆ ಪಿಕಪ್ ವಾಹನಕ್ಕೆ ಬಡಿದು ಅಲ್ಲೇ ಬಿದ್ದಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಿ ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಿ ಉನ್ನತ ಮಟ್ಟದ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟರು.
ಮೃತರು ಪತ್ನಿ ನಬೀಸಾ, ಮಕ್ಕಳಾದ ಅಬ್ದುಲ್ಲ, ಅಬ್ದುಲ್ ರಹಿಮಾನ್, ಫಾತಿಮಾ, ಜಮೀಲಾ, ಸಮೀರಾ, ಮುಬೀನ, ಸಹೋದರಿ ಆಮಿನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.