ಪಿಕಪ್ ವ್ಯಾನ್ ಸ್ಕೂಟರ್‌ಗೆ ಢಿಕ್ಕಿ: ಜವುಳಿ
ವ್ಯಾಪಾರಿಯ ನಿಧನದಿಂದ ಶೋಕಸಾಗರಕುಂಬಳೆ: ಮೊಗ್ರಾಲ್ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕಪ್ ವ್ಯಾನ್ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಜವುಳಿ ವ್ಯಾಪಾರಿ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.
ಉಪ್ಪಳ ಮೂಸೋಡಿ ನಿವಾಸಿ ಯೂ, ಉಪ್ಪಳದಲ್ಲ್ಲಿ ಐಸೋಡ್ ಎಂಬ ಜವುಳಿ ಅಂಗಡಿ ಮಾಲಕನಾದ ಅಬ್ದುಲ್ ಅಸೀಸ್ (48) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಸಂಜೆ 5.30ರ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಆಘಾತದಿಂದ ಸ್ಕೂಟರ್‌ನಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅಬ್ದುಲ್ ಅಸೀಸ್‌ರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಗಂಭೀರ ಗಾಯ ಗೊಂಡುದರಿಂದ ಬಳಿಕ ಮಂಗ ಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ನಿಧನ ಸಂಭವಿಸಿದೆ. ಮುಹಮ್ಮದ್ ಪಾಡಿ-ನಫೀಸ ದಂಪತಿಯ ಪುತ್ರನಾದ ಮೃತರು ಪತ್ನಿ ಮುಂತಾಸ್, ಮಕ್ಕಳಾದ ಹಮ್ನ, ಶಮ್ನ, ಮುಹಮ್ಮದ್ ಶಹಲ್, ಆಯಿಶ, ಸಹೋದರ-ಸಹೋ ದರಿಯರಾದ ಹಕೀಂ, ರಜಾಕ್, ಖದೀಜ, ಫಾತಿಮ, ಸಮೀರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.