ಪಿಣರಾಯಿ ವಿಜಯನ್ ಪುತ್ರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ

ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ ವೀಣಾ ವಿಜಯನ್ ಮತ್ತು ಅವರ ಮಾಲಕತ್ವದ ಲ್ಲಿರುವ ಐ.ಟಿ ಕಂಪೆನಿ ವಿರುದ್ಧ  ಜಾರಿ ನಿರ್ದೇಶನಾಲಯ (ಇಡಿ)   ದಾಖಲಿ ಸಿಕೊಂಡಿರುವ ಪ್ರಕರಣದ  ತನಿಖೆಯನ್ನು ತೀವ್ರಗೊಳಿಸಿದೆ.

ಮನಿ ಲಾಂಡರಿಂಗ್ ತಡೆ ಕಾಯ್ದೆ ಪ್ರಕಾರ  ವೀಣಾ ವಿಜಯನ್ ಮತ್ತು ಅವರ ಕಂಪೆನಿ ವಿರುದ್ಧ ಇ.ಡಿ ಈ ಪ್ರಕ ರಣ ದಾಖಲಿಸಿಕೊಂಡಿದೆ. P ಕೊಚ್ಚಿನ್ ಮಿನರಲ್ಸ್ ಆಂಡ್ ಕ್ಯೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ೨೦೧೭ ಮತ್ತು ೨೦೧೮ರಲ್ಲಿ ವೀಣಾ ವಿಜಯನ್‌ರ ಮಾಲಕತ್ವದಲ್ಲಿರುವ ಎಕ್ಸಾಲಾಜಿಕ್ ಸೊಲ್ಯೂಶನ್ ಎಂಬ ಹೆಸರಿನ ಕಂಪೆನಿಗೆ  ಮಾಸಿಕ ಪಾವತಿಯಂತೆ  ಒಟ್ಟು ೧.೭೨ ಕೋಟಿ ರೂ. ವರ್ಗಾವಣೆ ಮಾಡಿದೆ ಎಂಬ ಆರೋಪದಂತೆ ಇ.ಡಿ ಈ ಪ್ರಕರಣ ದಾಖಲಿಸಿಕೊಂಡಿದೆ. ಈಬಗ್ಗೆ ಈಹಿಂದೆ ಅಪರಾಧ ತನಿಖಾ ಕಚೇರಿ (ಎಸ್‌ಎಫ್‌ಇಒ) ತನಿಖೆ ಆರಂಭಿಸಿತ್ತು. ಅದರ ವಿರುದ್ಧ ವೀಣಾ ವಿಜಯನ್ ಕರ್ನಾಟಕ ಹೈಕೋರ್ಟ್‌ಗೆ  ಮೊರೆ ಹೋಗಿದ್ದರು. ಆ ಅರ್ಜಿಯನ್ನು ಕಳೆದ ತಿಂಗಳು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು  ಮಾತ್ರವಲ್ಲ ಅಂತಹ ನಿಯೋಜನೆಗಾಗಿ ಕೇಂದ್ರ ಸರಕಾರದ ಕೈಗೆ ಸಂಕೋಲೆ ತೊಡಿಸಲು ಸಾಧ್ಯವಿಲ್ಲ ವೆಂದೂ ಹೇಳಿತ್ತು. ಅದಾದ ಬೆನ್ನಲ್ಲೇ ಈ ಪ್ರಕರಣದ  ತನಿಖೆಯನ್ನು ಇಡಿ ಕೈಗೆತ್ತಿಕೊಂಡಿದೆ.  ನನ್ನ ಪತ್ನಿಯ ನಿವೃತ್ತಿ ನಿಧಿಯನ್ನು ಬಳಸಿ  ಪುತ್ರಿ ವೀಣಾ ಕಂಪೆನಿ ಯನ್ನು ಪ್ರಾರಂಭಿಸಿದ್ದಾಳೆ. ಆದ್ದರಿಂದ ನನ್ನ ಪುತ್ರಿ ಮತ್ತು ನಮ್ಮ ಕುಟುಂಬದ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸುಳ್ಳು ಎಂದು ಕಳೆದ ಜನವರಿಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು.

ಈ ಪ್ರಕರಣದ ತನಿಖೆಯನ್ನು ಈಗ ಇ.ಡಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಶೀಘ್ರದಲ್ಲೇ ಸಮನ್ಸ್ ಜಾರಿಗೊಳಿಸುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಯ ವೇಳೆಯಲ್ಲೇ ಇ.ಡಿ ತನಿಖೆ ಆರಂಭಿಸಿದ್ದು, ಅದು ಸಿಪಿಎಂ ಮಾತ್ರವಲ್ಲ ಎಡರಂಗದಲ್ಲೂ ಕಳವಳ ಸೃಷ್ಟಿಸತೊಡಗಿದೆ. ಇ.ಡಿಯನ್ನು ಕೇಂದ್ರಸರಕಾರ ತನ್ನ ಗೊಂಬೆ ಯನ್ನಾಗಿಸಿ ತನ್ನ ಎದುರಾಳಿಗಳ ವಿರುದ್ಧ ಪ್ರಯೋಗಿಸತೊಡಗಿ ದೆಯೆಂದು ಆರೋಪಿಸಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಇದನ್ನು ಸಂಘಟಿತವಾಗಿ ಎದುರಿಸಲಾಗು ವುದೆಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page