ಪಿ. ಜಯರಾಜನ್ ಕೊಲೆಯತ್ನ ಪ್ರಕರಣ:  ಆರೋಪಿಗಳ ಖುಲಾಸೆಗೊಳಿಸಿದ ತೀರ್ಪು ವಿರುದ್ಧ ರಾಜ್ಯ ಸರಕಾರ ಅಪೀಲು

ತಿರುವನಂತಪುರ: ಸಿಪಿಎಂ ಮುಖಂಡ ಪಿ. ಜಯರಾಜನ್‌ರನ್ನು  ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ ವಿರುದ್ಧ ರಾಜ್ಯ ಸರಕಾರ ಅಪೀಲು ನೀಡಿದೆ. ಪಿ. ಜಯರಾಜನ್‌ರನ್ನು ಮನೆಗೆ ನುಗ್ಗಿ ಕಡಿದು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ವಿಚಾರಣೆ ನ್ಯಾಯಾ ಲಯ ಶಿಕ್ಷೆ ನೀಡಿದ ಆರ್‌ಎಸ್ ಎಸ್ ಕಾರ್ಯಕರ್ತ ರಾದ ಆರು ಆರೋಪಿಗಳಲ್ಲಿ ಓರ್ವನನ್ನು ಉಳಿದು ಇತರ ಎಲ್ಲರನ್ನು ಹೈಕೋರ್ಟ್ ಖುಲಾಸೆಗೊಳಿಸಿತ್ತು. ಇದರ ವಿರುದ್ಧ ರಾಜ್ಯ ಸರಕಾರ ಸುಪ್ರಿಂಕೋರ್ಟ್‌ಗೆ ಅರ್ಜಿ ನೀಡಿದೆ.

೧೯೯೯ ಆಗಸ್ಟ್ ೨೫ರ ಓಣಂ ಹಬ್ಬದಂದು ಪಿ. ಜಯರಾಜನ್‌ರನ್ನು ಕಿಳಕ್ಕೆ ಕದಿರೂರಿನಲ್ಲಿರುವ ಮನೆಗೆ ನುಗ್ಗಿ ಕೊಲೆಗೈಯ್ಯಲು ಯತ್ನಿಸಲಾಗಿತ್ತು. ಆರ್‌ಎಸ್‌ಎಸ್ ಕಾರ್ಯಕರ್ತರಾದ ೯ ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಇವರಲ್ಲಿ ಆರು ಮಂದಿಯನ್ನು ೨೦೦೭ರಲ್ಲಿ ತಪ್ಪಿತಸ್ಥರೆಂದು ಪತ್ತೆಹಚ್ಚಿ ವಿಚಾರಣಾ ನ್ಯಾಯಾಲಯ ಶಿಕ್ಷೆ ಘೋಷಿಸಿತ್ತು. ಮೂರು ಮಂದಿಯನ್ನು ಖುಲಾಸೆಗೊಳಿಸಿತ್ತು. ಆದರೆ ಹೈಕೋರ್ಟ್ ಎರಡನೇ ಆರೋಪಿಯಾದ ಆರ್‌ಎಸ್‌ಎಸ್ ಕಾರ್ಯಕರ್ತ ಚಿರುಕಂಡೊತ್ತ್ ಪ್ರಶಾಂತ್ ಮಾತ್ರವೇ ತಪ್ಪಿತಸ್ಥರೆಂದು ಪತ್ತೆಹಚ್ಚಿತ್ತು. ಪ್ರಕರಣದಲ್ಲಿ ಪ್ರೋಸಿಕ್ಯೂಷನ್ ಸೂಕ್ತವಾದ ದಾಖಲೆಗಳನ್ನು ಹಾಜರುಪಡಿಸಿಲ್ಲವೆಂದು ಹೈಕೋರ್ಟ್ ತಿಳಿಸಿತ್ತು. ಸರಿಯಾದ ಸಾಕ್ಷಿ ಹೇಳಿಕೆಗಳ ಅಭಾವ ಕೂಡಾ  ಆರೋಪಿಗಳು ಖುಲಾಸೆಗೊಳ್ಳಲು ಕಾರಣವಾಗಿ ಹೈಕೋರ್ಟ್ ಸೂಚಿಸಿತ್ತು. ಆದರೆ ಹೈಕೋರ್ಟ್‌ನ ಈ ನಿಲುವು ತಪ್ಪೆಂದು ರಾಜ್ಯ ಸರಕಾರ ಸುಪ್ರಿಂಕೋರ್ಟ್‌ಗೆ ನೀಡಿದ  ಅಪೀಲ್‌ನಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

You cannot copy content of this page