ಪುತ್ರನ ಕೊಲ್ಲಲು ಯತ್ನಿಸುತ್ತಿದ್ದ ಮಧ್ಯೆ ತಾಯಿಗೆ ಗುಂಡು: ಆರೋಪಿ ಪತಿ ವಿಷ ಸೇವಿಸಿ ಆತ್ಮಹತ್ಯೆ
ಸುಳ್ಯ: ಪುತ್ರನನ್ನು ರಕ್ಷಿಸಲು ಯತ್ನಿಸುತ್ತಿದ್ದ ಮಧ್ಯೆ ಯುವತಿ ಪತಿಯ ಗುಂಡೇಟಿಗೆ ಬಲಿಯಾಗಿದ್ದಾರೆ. ಮರು ಕ್ಷಣದಲ್ಲಿ ಪತಿ ವಿಷ ಸೇವಿಸಿ ಆತ್ಮಹತ್ಯೆ ಗೈದ ಘಟನೆ ನಿನ್ನೆ ರಾತ್ರಿ ನಡೆದಿದೆ. ಸುಳ್ಯ ಕೆಂಬ್ರಾಜೆ ಕೋಡಿಮಜಲುನಲ್ಲಿ ಘಟನೆ ಸಂಭವಿಸಿದ್ದು, ಪತ್ನಿ ವಿನೋದ (42)ರನ್ನು ಗುಂಡು ಹಾರಿಸಿ ಕೊಂದ ಬಳಿಕ ಪತಿ ರಾಮಚಂದ್ರ ಗೌಡ (54)ವಿಷ ಸೇವಿಸಿ ಆತ್ಮಹತ್ಯೆಗೈದಿದ್ದಾರೆ. ನಿನ್ನೆ ರಾತ್ರಿ 10 ಗಂಟೆಗೆ ಘಟನೆ ನಡೆದಿದೆ. ಮದ್ಯದಮಲಿನಲ್ಲಿ ತಲುಪಿದ ರಾಮಚಂದ್ರ ಗೌಡ ಪತ್ನಿ ಹಾಗೂ ಪುತ್ರನೊಂದಿಗೆ ಜಗಳ ಮಾಡುತ್ತಿದ್ದ ವೇಳೆ ಪುತ್ರನ ವಿರುದ್ಧ ಕೋವಿಯಿಂದ ಗುಂಡು ಹಾರಿಸಲು ಯತ್ನಿಸಿದ್ದರು. ಇದನ್ನು ತಡೆಯಲು ಪತ್ನಿ ವಿನೋದ ಪುತ್ರನ ಅಡ್ಡ ಬಂದಿದ್ದು, ಗುಂಡು ಆಕೆಗೆ ತಗಲಿ ಮೃತಪಟ್ಟಿದ್ದಾರೆ. ಬಳಿಕ ರಾಮಚಂದ್ರ ಗೌಡ ವಿಷ ಸೇವಿಸಿ ಆತ್ಮಹತ್ಯೆಗೈದಿದ್ದು, ಪುತ್ರ ಪ್ರಶಾಂತ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.