ಪುದುಕ್ಕೋಳಿಯಲ್ಲಿ ಪಾಯಿಖಾನೆಯ ಮಲಿನಜಲ ರಸ್ತೆಗೆ: ದುರ್ವಾಸನೆ ಅಸಹನೀಯ

ಬದಿಯಡ್ಕ: ನೀರ್ಚಾಲು ಪುದು ಕ್ಕೋಳಿಯಲ್ಲಿ ದುರ್ವಾಸನೆಯಿಂದ ಸಂಚರಿಸಲಾಗುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ನಿನ್ನೆ ರಾತ್ರಿ ವಾಹನದಲ್ಲಿ ಪಾಯಿಖಾನೆಯ ಮಲಿನ ನೀರನ್ನು ಇಲ್ಲಿ ಹರಿಯ ಬಿಟ್ಟಿರುವುದಾಗಿ ಶಂಕಿಸಲಾಗಿದೆ. ರಸ್ತೆಯಲ್ಲಿ ಮಲಿನ ನೀರು ತುಂಬಿ ಕೊಂಡಿದೆ. ಸಮೀಪದ ಮೋರಿಸಂಕದಡಿ ಯಲ್ಲಿ ಈ ನೀರು ಸಂಗ್ರಹಗೊಂಡು ಪರಿಸರವಿಡೀ ದುರ್ವಾಸನೆ ಹರಡುತ್ತಿದೆ. ಜೊತೆಗೆ ಇದೇ ಪರಿಸರದಲ್ಲಿ ಪ್ಲಾಸ್ಟಿಕ್ ಸಹಿತದ ತ್ಯಾಜ್ಯವನ್ನು ರಸ್ತೆಯಲ್ಲೇ ಹಾಕಿರುವುದು ಕಂಡು ಬರುತ್ತಿದೆ. ಇದು ಯಾರ ಕೆಲಸವೆಂಬುದನ್ನು ಪತ್ತೆಹಚ್ಚಲು ಸ್ಥಳೀಯರು ತೊಡಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page