ಪೂಕಟ್ಟೆಯಲ್ಲಿ ಕಂಡುಬಂದ ಪ್ರಾಣಿ ಕಾಡುಬೆಕ್ಕು: ಚಿರತೆಯೆಂದು ಭಯಗೊಂಡ ಜನತೆ

ಕುಂಬಳೆ: ಕೊಡ್ಯಮ್ಮೆ ಪೂಕಟ್ಟೆಯಲ್ಲಿ ನಿನ್ನೆ ಸಂಜೆ ಕಂಡುಬಂದಿರುವುದು ಕಾಡುಬೆಕ್ಕು ಎಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ನಿನ್ನೆ ಸಂಜೆ ಪೂಕಟ್ಟೆಯ ಕಾಡುಪ್ರದೇಶದಲ್ಲಿ ಚಿರತೆ ಕಂಡುಬಂದಿರುವುದಾಗಿ ಕೆಲವರು ವದಂತಿ ಹರಡಿದ್ದರು. ಅಲ್ಲದೆ ಪ್ರಾಣಿ ನಡೆದುಹೋಗುವ  ದೃಶವನ್ನು ಚಿತ್ರೀಕರಿಸಿದ್ದಾರೆ. ಚಿರತೆ ಕಂಡುಬಂದಿದೆಯೆಂದು ವದಂತಿ ಹರಡಿದುದರಿಂದಾಗಿ ಸ್ಥಳೀಯರು ಆತಂಕಗೊಂಡಿದ್ದರು. ಈ ಬಗ್ಗೆ ಅರಣ್ಯಾಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು. ಅಲ್ಲದೆ ನಾಗರಿಕರು ತೆಗೆದ ದೃಶ್ಯವನ್ನು ಅರಣ್ಯಾಧಿಕಾರಿಗಳಿಗೆ ನೀಡಲಾಗಿತ್ತು. ದೃಶ್ಯ ವೀಕ್ಷಿಸಿದ ಅಧಿಕಾರಿಗಳು ಅದು ಕಾಡುಬೆಕ್ಕು ಎಂದು ತಿಳಿಸಿದ್ದಾರೆ. ಇದರಿಂದ ಜನತೆಯ ಭಯ ದೂರವಾಯಿತು.

Leave a Reply

Your email address will not be published. Required fields are marked *

You cannot copy content of this page