ಪೂರ್ವದ್ವೇಷದಿಂದ ಹಲ್ಲೆ: ಮೂವರ ಸೆರೆ
ಕಾಸರಗೋಡು: ಎಡನೀರು ಬಳಿ ನಿವಾಸಿ ಪ್ರಭಾಕರನ್ ಕೆ.ಎನ್ (54) ಎಂಬವರ ಮೇಲೆ ಈತಿಂಗಳ ೯ರಂದು ಎಡನೀರಿನಲ್ಲಿ ಪೂರ್ವ ದ್ವೇಷದಿಂದ ಹಲ್ಲೆ ನಡೆಸಿ ರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಮೂವರ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮುಳಿಯಾರು ಬಳಿಯ ನಿವಾಸಿ ಸತ್ಯನ್ (37) ಹಾಗೂ 17 ವರ್ಷದ ಇತರ ಇಬ್ಬರನ್ನು ಈ ಪ್ರಕರಣಕ್ಕೆ ಸಂ ಬಂಧಿಸಿ ಪೊಲೀಸರು ಬಂಧಿಸಿದ್ದಾರೆ.