ಪೂರ್ವ ವಿದ್ಯಾರ್ಥಿಗಳಿಂದ ಕಾಸರಗೋಡು ಶಾಲೆಗೆ ವಾಟರ್ ಕೂಲರ್ ಹಸ್ತಾಂತರ
ಕಾಸರಗೋಡು: ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ಶಿಕ್ಷಣ ಕೈಗೊಂಡ ಮೊದಲ ಬ್ಯಾಚ್ನ ಸಂಗಮ ಈ ತಿಂಗಳ ೨೩ರಂದು ನಡೆಯಲಿದ್ದು, ಇದರಂಗವಾಗಿ ಶಾಲೆಗೆ ವಾಟರ್ ಕೂಲರ್ ಹಸ್ತಾಂತರಿಸಿದರು. ಶಾಲೆಯ ಹೈಯರ್ ಸೆಕೆಂಡರಿ ಬ್ಲಾಕ್ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲೆ ಗೀತಾ ತೋಪಿಲ್ ಸೀಮಾ ಟೀಚರ್ಗೆ ನೀಡಿದರು. ಪೂರ್ವ ವಿದ್ಯಾರ್ಥಿಗಳಾದ ಆಶಿಫ್, ರಶೀದ್, ವಿನೇಶ್, ಸಾಬಿತ್ ಮುಹಮ್ಮದ್, ರಖೀಬ್, ಲತೀಫ್, ಶರೀಫ್, ಸುದಿನ್, ಶಾಹಿರ, ಸಲ್ವಾ, ನಿಶಾ, ಸಜಿತ, ಮೋನಿಶ, ಅಂಬಿಕಾ, ಮಹೇಶ್ವರಿ ಭಾಗವಹಿಸಿದರು.