ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ರಾಜಗೋಪುರ ಮೇಲಂತಸ್ತು ನಿರ್ಮಾಣಕ್ಕೆ ಚಾಲನೆ
ಪೆರಡಾಲ ಉದನೇಶ್ವರ ದೇವಸ್ಥಾನ ಜೀರ್ಣೋ ದ್ಧಾರದಂಗವಾಗಿ ರಾಜಗೋಪುರದ ಮೇಲ್ ಅಂತಸ್ತಿನ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಉದ್ಯಮಿ ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಪುನ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ರಾಜ ಗೋಪುರ ನಿರ್ಮಾಣ ಕೆಲಸ ಆದಷ್ಟು ಬೇಗ ಶೀಘ್ರ ವಾಗಿ ಮುಗಿಸಿ ಬ್ರಹ್ಮ ಕಲಶಭಿಷೇಕ ಕಾರ್ಯಕ್ರಮ ನೋಡಲು ಎಲ್ಲರಿಗೂ ಸೌಭಾಗ್ಯ ಸಿಗಲಿ ಎಂದರು. ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣï ಭಟ್ ಸ್ವಾಗತಿಸಿದರು, ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ರೈ ಪೆರಡಾಲ ಗುತ್ತು, ಕೋಶಾಧಿಕಾರಿ ಸೂರ್ಯನಾರಾಯಣ ಬಿ, ಆಡಳಿತ ಮಂಡಳಿ ಸದಸ್ಯ ಜಗದೀಶ ಪೆರಡಾಲ, ಕೃಷ್ಣನ್ ಬದಿಯಡ್ಕ ,ಸಮಿತಿ ಪದಾಧಿಕಾರಿಗಳಾದ ಸತೀಶ ಪುದ್ಯೋಡು, ಭಾಸ್ಕರ ಬಿ, ಗಣೇಶ ಭಟ್, ಅರವಿಂದ ಭಟ್ ಈಳಂತೋಡಿ, ಅರ್ಚಕ ವೃಂದ ಸಿಬ್ಬಂದಿ ವರ್ಗ, ಸಮಿತಿ ಸದಸ್ಯರು, ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ವಂದಿಸಿದರು.