ಪೆರ್ಲಡ್ಕದಲ್ಲಿ ಚಿರತೆಭೀತಿ: ಎರಡು ನಾಯಿ ಮರಿಗಳು ಬಲಿ
ಕಾಸರಗೋಡು: ಪೆರ್ಲಡ್ಕದಲ್ಲ್ಲಿ ಚಿರತೆ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ಎರಡು ನಾಯಿಮರಿಗಳನ್ನು ಚಿರತೆ ಕೊಂದುಹಾಕಿದೆ. ಮತ್ತೆರಡು ಮರಿಗಳು ನಾಪತ್ತೆಯಾಗಿವೆ ಎನ್ನಲಾಗಿದೆ. ನಾಗರಿಕರು ನೀಡಿದ ಮಾಹಿತಿಯಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು. ಪೆರ್ಲಡ್ಕ ತೇವುಕ್ಕಾಲ್ ಎಂಬಲ್ಲಿನ ಬಾಲಕೃಷ್ಣನ್ ನಾಯರ್‌ರ ಮನೆಯ ನಾಯಿ ಮರಿಗಳು ಚಿರತೆಯ ದಾಳಿಗೀಡಾಗಿವೆ. ನಿನ್ನೆ ರಾತ್ರಿ ೧೦ಗಂಟೆ ವೇಳೆ ಘಟನೆ ನಡೆದಿದೆ. ರಾತ್ರಿ ಹಲವು ನಾಯಿಗಳು ಬೊಗಳುವುದು ಕೇಳಿಸಿರುವುದಾಗಿ ಮನೆಯವರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಎರಡು ನಾಯಿಮರಿಗಳು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸ್ಥಳದಲ್ಲಿ ಚಿರತೆಯದ್ದೆಂದು ಅಂದಾಜಿಸಲಾದ ಹೆಜ್ಜೆ ಗುರುತುಗಳು ಕಂಡುಬಂದಿವೆ. ಒಂದು ತಿಂಗಳ ಹಿಂದೆ ಇಲ್ಲಿಂದ ಅಲ್ಪ ದೂರದ ಕರಕ್ಕಯಡ್ಡುಕ್ಕ ಎಂಬಲ್ಲಿ ಚಿರತೆಯನ್ನು ಕಂಡಿರುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ.