ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಕಾಸರಗೋಡು: ನಗರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಈ ತಿಂಗಳ ೧೫ರಿಂದ ೨೪ರವರೆಗೆ ಜರಗಲಿದೆ.

೧೫ರಂದು ಬೆಳಿಗ್ಗೆ ೮ಕ್ಕೆ ಮಹಾಗಣಪತಿ ಹವನ, ನವಕಾಭಿಷೇಕ, ವಿಶೇಷ ಸೇವೆಗಳು, ಮಹಾಪೂಜೆ, ೯ರಿಂದ ಭಜನೆ, ಅಪರಾಹ್ನ ೨.೩೦ಕ್ಕೆ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ತರಬೇತಿ ಕೇಂದ್ರದ ಆರನೇ ವಾರ್ಷಿಕೋತ್ಸವ. ಸಭಾ ಕಾರ್ಯಕ್ರಮ, ಉದ್ಘಾಟನೆ, ಗೌರವಾರ್ಪಣೆ, ನಾಟ್ಯಗುರು ರಾಕೇಶ್ ರೈ ಅಡ್ಕ ಅವರ ನಿರ್ದೇಶನದಲ್ಲಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ‘ವಾಲಿಮೋಕ್ಷ-ಇಂದ್ರಜಿತು ಕಾಳಗ’ ಪ್ರದರ್ಶನಗೊಳ್ಳಲಿದೆ. ೭ರಿಂದ ಭಜನೆ, ೧೬ರಿಂದ ೨೦ರವರೆಗೆ ಪ್ರತಿದಿನ ಸಂಜೆ ೭ರಿಂದ ಭಜನೆ, ೨೧ರಂದು ಸಂಜೆ ೭ರಿಂದ ಶ್ರೀ ಕುತ್ಯಾಳ ಯಕ್ಷಗಾನ ತರಬೇತಿ ಕೇಂದ್ರ ಕೂಡ್ಲು ಇದರ ಸದಸ್ಯರಿಂದ ಯಕ್ಷಗಾನ ಬಯಲಾಟ ‘ಏಕಾದಶಿ ದೇವಿ ಮಹಾತ್ಮೆ’, ೨೨ರಂದು ಬೆಳಿಗ್ಗೆ ೯ರಿಂದ ಭಜನೆ, ೧೦ರಿಂದ ಶ್ರೀ ದೇವರಿಗೆ ಶ್ರೀಗಂಧ ಲೇಪಿತ ಅಲಂಕಾರ ಪ್ರಾರಂಭ, ಮಹಾಪೂಜೆ, ಸಂಜೆ ೭ರಿಂದ ಶ್ರೀ ಕುತ್ಯಾಳ ಯಕ್ಷಗಾನ ತರಬೇತಿ ಕೇಂದ್ರ  ಕೂಡ್ಲು ಇದರ ವಿದ್ಯಾರ್ಥಿಗಳಿಂದ  ಯಕ್ಷಗಾನ ಬಯಲಾಟ ‘ಮೀನಾಕ್ಷಿ ಕಲ್ಯಾಣ’, ೨೩ರಂದು ಬೆಳಿಗ್ಗೆ ಆಯುಧ ಪೂಜೆ, ಸಂಜೆ ೬ಕ್ಕೆ ವಿಶ್ವರೂಪದರ್ಶನ, ೭ರಿಂದ ಸಿಂಧು ಭಾಸ್ಕರನ್ ‘ನಾಟ್ಯಾಲಯ’ ಇದರ ಶಿಷ್ಯವೃಂದ ಹಾಗೂ ಧನ್ಯ ಮುರಳಿ ಆಸ್ರ ಇವರಿಂದ ನೃತ್ಯ ಕಾರ್ಯಕ್ರಮ, ರಾತ್ರಿ ೯ಕ್ಕೆ ಮಹಾಪೂಜೆ, ೯.೩೦ಕ್ಕೆ ಶ್ರೀ ದೇವರ ಉತ್ಸವ ಬಲಿ, ಅಶ್ವತ್ಥಕಟ್ಟೆಗೆ ಘೋಷಯಾತ್ರೆ, ೨೪ರಂದು ಬೆಳಿಗ್ಗೆ ಕದಿರು (ತೆನೆ) ತುಂಬಿಸುವುದು, ಮಧ್ಯಾಹ್ನ ನವಾನ್ನ, ಸಂಜೆ ೫ರಿಂದ ಶ್ರೀ ತ್ಯಾಗರಾಜ ಸಂಗೀತ ಸಭಾ ಕಾಸರಗೋಡು, ಶ್ರೀ ಪುರಂದರದಾಸ ಸಂಗೀತ ಕಲಾ ಮಂದಿರ ಕಾಸರಗೋಡು ಇವರಿಂದ ಸಂಗೀತ ಸೇವೆ, ರಾತ್ರಿ ೯.೩೦ಕ್ಕೆ ಶ್ರೀ ದೇವರ ಘೋಷಯಾತ್ರೆ, ಶಾಂತರಾಮ- ಸುಧಾಕರ ರಸ್ತೆ, ಬೀಚ್ ರಸ್ತೆ, ಮಠದ ಪೇಟೆ, ನಾಗನಕಟ್ಟೆಯಾಗಿ ಅಶ್ವತ್ಥಕಟ್ಟೆಯ ಮುಂಭಾಗದಲ್ಲಿ ವಿವಿಧ ಛದ್ಮವೇಷಗಳ ಪ್ರದರ್ಶನ, ಹುಲಿವೇಷದವರಿಂದ ಕುಣಿತ, ೧೧.೩೦ಕ್ಕೆ ಕಟ್ಟೆಪೂಜೆ, ೧೨ಕ್ಕೆ ಶ್ರೀ ಕ್ಷೇತ್ರದಲ್ಲಿ ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಹಾಪೂಜೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page