ಪೈಂಟಿಂಗ್ ಕಾರ್ಮಿಕ ಸಾವನ್ನಪ್ಪಿದ ಪ್ರಕರಣ: ನೆರೆ ಮನೆ ನಿವಾಸಿ ಸೆರೆ

ಕಾಸರಗೋಡು:  ಕೇಳುಗುಡ್ಡೆ ಅಯ್ಯಪ್ಪನಗರ ನಿವಾಸಿ ಪೈಂಟಿಂಗ್ ಕಾರ್ಮಿಕ ಸದಾನಂದ (೬೪)ಎಂಬವರು  ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಅವರ ನೆರೆಮನೆ ನಿವಾಸಿಯನ್ನು ಕಾಸರಗೋಡು ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ಬಂಧಿಸಿದ್ದಾರೆ. ಕೇಳುಗುಡ್ಡೆ ಅಯ್ಯಪ್ಪ ನಗರದ ಲಕ್ಷ್ಮಿ ನಿವಾಸದ ಕೆ. ಸೂರಜ್ (೩೬) ಎಂಬಾತ ಬಂಧಿತನಾದ ಆರೋಪಿ. ಈತ ಪೈಂಟಿಂಗ್ ಕಾರ್ಮಿಕನಾಗಿದ್ದಾನೆ. ಈತನನ್ನು ಇಂದು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ (೧) ನ್ಯಾಯಾಲಯದಲ್ಲಿ ಹಾಜರುಪಡಿಸ ಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ ೨೬ರಂದು ರಾತ್ರಿ ಕೇಳುಗುಡ್ಡೆಯಲ್ಲಿ ಸದಾನಂದ ಹಾಗೂ ಸೂರಜ್ ಮಧ್ಯೆ ವಾಗ್ವಾದ ನಡೆದಿದ್ದು, ಈ ವೇಳೆ ಸದಾನಂದರನ್ನು ದೂಡಿ ಹಾಕಿರುವುದಾಗಿ ದೂರಲಾಗಿದೆ. ಇದರಿಂದ ಗಾಯಗೊಂಡ ಸದಾನಂದ ಚಿಕಿತ್ಸೆ ಮಧ್ಯೆ ಸಾವನ್ನಪ್ಪಿದ್ದರು. ಘಟನೆ ಬಗ್ಗೆ ಕಾಸರಗೋಡು ಪೊಲೀಸರು ಮೊದಲು ಹಲ್ಲೆ ನಡೆಸಿ ಗಾಯಗೊಳಿಸಿದ ಸೆಕ್ಷನ್ ಪ್ರಕಾರ ಆರೋಪಿ ವಿರುದ್ಧ ಪ್ರP ರಣ ದಾಖಲಿಸಿಕೊಂಡಿದ್ದರು. ಗಾಯ ಗೊಂಡು ಚಿಕಿತ್ಸೆಯಲ್ಲಿದ್ದ ಸದಾನಂದ ಕಾಸರಗೋಡು ಜನರಲ್  ಆಸ್ಪತ್ರೆಯಲ್ಲಿ ನಿನ್ನೆ ಸಾವನ್ನಪ್ಪಿದ ಬಳಿಕ ಆರೋಪಿಯ ವಿರುದ್ಧ ಪೊಲೀಸರು ಮನಪೂರ್ವಕ ವಲ್ಲದ ನರಹತ್ಯೆ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page