ಪೈಂಟ್ ಫ್ಯಾಕ್ಟರಿಯಲ್ಲಿ ಅಗ್ನಿ ಅನಾಹುತ: ೧೧ ಮಂದಿ ಸಜೀವದಹನ

ನವದೆಹಲಿ: ದೆಹಲಿಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿ ದ್ದು, ೧೧ ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ದೆಹಲಿ ಆಲಿಪುರ ಮುಖ್ಯ ಮಾರುಕಟ್ಟೆಯಲ್ಲಿರುವ ಪೈಂಟ್ ಫ್ಯಾಕ್ಟರಿಯಲ್ಲಿ ಈ ದುರಂತ ಸಂಭವಿಸಿದೆ. ಇದರಲ್ಲಿ ೧೧ ಮಂದಿ ಸಜೀವ ದಹನಗೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಇದರಲ್ಲಿ ನಾಲ್ಕು ಮಂದಿಯ ಸ್ಥಿತಿ ಅತ್ಯಂತ ಗಂಭೀರವಾಗಿದೆ.  ಈ ಫ್ಯಾಕ್ಟರಿಯಲ್ಲಿ ಮೊದಲು  ಆಕಸ್ಮಿಕ ವಾಗಿ ಬೆಂಕಿ ಕಾಣಿಸಿಕೊಂಡು, ಬಳಿಕ ಅದು ಇಡೀ ಫ್ಯಾಕ್ಟರಿಗೆ ಆವರಿಸಿದೆ. ಪೈಂಟ್‌ಗೆ ಬಳಸುವ ಯಾವುದೋ ಕೆಮಿಕಲ್‌ನಿಂದ ಬೆಂಕಿ ಎದ್ದಿರಬಹುದೆಂದು ಶಂಕಿಸಲಾಗುತ್ತಿದೆ. ತಕ್ಷಣ ಅದು ಇಡೀ ಫ್ಯಾಕ್ಟರಿಗೆ ಆವರಿಸಿಕೊಂಡಿದೆ. ಆ ವೇಳೆ ಅದರೊಳಗೆ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರು ಬೆಂಕಿಯಲ್ಲಿ ಸಿಲುಕಿಕೊಂಡು ೧೧ ಮಂದಿ ಅಲ್ಲೇ ಸಜೀವ ದಹನಗೊಂಡಿದ್ದಾರೆ. ಗಂಭೀರ ಸುಟ್ಟು ಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿದೆ. ಆ ಬಗ್ಗೆ ಅಗ್ನಿಶಾಮಕದಳ ತಕ್ಷಣ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಸತತ ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿಯ ಕೆನ್ನಾಲಿಗೆಗೆ  ಆ ಫ್ಯಾಕ್ಟರಿಯ ಹತ್ತಿರದ ಕೆಲವು ಮನೆಗಳು ಮತ್ತು ಅಂಗಡಿಗಳು ಬೆಂಕಿಗಾಹುತಿಯಾಗಿವೆ.

Leave a Reply

Your email address will not be published. Required fields are marked *

You cannot copy content of this page