ಪೈವಳಿಕೆ: ಬಾಲಕಿ, ಆಟೋ ಚಾಲಕನ ಸಾವು ಪ್ರಕರಣ ಕೊಲೆ ಕೃತ್ಯವೇ ಎಂದು ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ
ಕೊಚ್ಚಿ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ನಿವಾಸಿಯಾದ ೧೫ರ ಹರೆಯದ ಬಾಲಕಿ ಹಾಗೂ ಆಟೋ ಚಾಲಕನಾದ ಮಂಡೆಕಾಪು ನಿವಾಸಿ ಪ್ರದೀಪ್ (42) ಎಂಬಿವರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಡೆಸುತ್ತಿರುವ ತನಿಖೆ ತೃಪ್ತಿಕರವೆಂದು ಹೈಕೋರ್ಟ್ ತಿಳಿಸಿದೆ. ಬಾಲಕಿ ನಾಪತ್ತೆಯಾದ ಬಗ್ಗೆ ತಾಯಿ ನೀಡಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯ ಈ ರೀತಿ ಅಭಿ ಪ್ರಾಯಪಟ್ಟಿದೆ. ಬಾಲಕಿ ಹಾಗೂ ಯುವಕನ ಸಾವು ಆತ್ಮಹತ್ಯೆಯಾಗಿ ದೆಯೆಂ ಬುದಾಗಿ ತನಿಖಾ ತಂಡ ಪ್ರಾಥಮಿಕವಾಗಿ ಅಂದಾಜಿಸಿದೆ. ಆದರೆ ಅದು ಕೊಲೆ ಕೃತ್ಯವಾಗಿದೆಯೇ ಎಂದು ಪರಿಶೀಲಿಸ ಬೇಕು. ಒಬ್ಬರದ್ದು ಆತ್ಮಹತ್ಯೆ ಹಾಗೂ ಮತ್ತೊಬ್ಬರದ್ದು ಕೊಲೆ ಕೃತ್ಯವೇ ಎಂಬುದಾಗಿ ತನಿಖೆ ನಡೆಸಬೇಕೆಂದೂ ಈ ಕುರಿತಾಗಿ ಸಮಗ್ರ ವರದಿಯನ್ನು ಗುರುವಾರ ಹಾಜರುಪಡಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಫೆಬ್ರವರಿ 11ರಂದು ರಾತ್ರಿ ನಿದ್ರಿಸಿದ್ದ ಬಾಲಕಿ ಮುಂಜಾನೆ ವೇಳೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದರು. ಬಾಲಕಿಯನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯ ವಾಗದ ಹಿನ್ನೆಲೆಯಲ್ಲಿ ತಾಯಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಮಾರ್ಚ್ ೯ರಂದು ನಾಗರಿ ಕರ ಸಹಾಯದಿಂದ ಪೊಲೀಸರು ನಡೆಸಿದ ಶೋಧ ವೇಳೆ ಬಾಲಕಿ ಹಾಗೂ ಪ್ರದೀಪ್ ಮರದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.