ಪೈವಳಿಕೆ ವಿಲೇಜ್ ಕಚೇರಿಗೆ ಜಿಲ್ಲಾಧಿಕಾರಿ ಸಂದರ್ಶನ
ಉಪ್ಪಳ: ಜಿಲ್ಲಾಧಿಕಾರಿಯವರ ಗ್ರಾಮ ಅದಾಲತ್ನ ಅಂಗವಾಗಿ ಜಿಲ್ಲಾಧಿಕಾರಿ ಇಂಬಶೇಖರ್ ನಿನ್ನೆ ಅಪರಾಹ್ನ ಪೈವಳಿಕೆ ಗ್ರಾಮ ಕಚೇರಿ ಸಂದರ್ಶಿಸಿ ಜನರಿಂದ ದೂರು ಸ್ವೀಕರಿಸಿದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಸದಸ್ಯರಾದ ಅಬ್ದುಲ್ಲ ಕೆ., ಸುನೀತ ವಲ್ಟಿ ಡಿ’ಸೋಜ, ಶ್ರೀನಿವಾಸ ಭಂಡಾರಿ, ಸೀತಾರಾಮ ಶೆಟ್ಟಿ, ರಹಮತ್ ರಹಿಮಾನ್, ಜನಕೀಯ ಸಮಿತಿ ಸದಸ್ಯರಾದ ಅಜೀಜ್ ಕಳಾಯಿ, ಅಂದುಂಞಿ ಹಾಜಿ ಚಿಪ್ಪಾರ್, ರೇಖಾ ಚಿಪ್ಪಾರ್, ಪೈವಳಿಕೆ ಗ್ರಾಮಾಧಿಕಾರಿ ಮೊಯ್ದೀನ್ ಕುಂಞಿ ಬಿ., ವಿಶೇಷ ಗ್ರಾಮಾಧಿಕಾರಿ ನವ್ಯ ಎ.ಆರ್., ಸಹಾಯಕ ಗ್ರಾಮಾಧಿಕಾರಿ ಶ್ರೀಜಿತ್ ಆರ್., ವಿಲ್ಲೇಜ್ ಫೀಲ್ಡ್ ಅಸಿಸ್ಟೆಂಟ್ಗಳಾದ ಬೈಜು ಟಿ.ಪಿ., ಮಿನಿ ಇ.ಕೆ., ಪಿ.ಟಿ.ಎಸ್. ಅಶ್ವಿತ್ ಭಾಗವಹಿಸಿದರು.