ಪೈವಳಿಕೆ ಸಹಕಾರಿ ಬ್ಯಾಂಕ್ ಚುನಾವಣೆ: ಸಿಪಿಐ-ಸಿಪಿಎಂ ಮಧ್ಯೆ ಪರಸ್ಪರ ಸ್ಪರ್ಧೆ

ಪೈವಳಿಕೆ: ಜೊತೆಗೆ ನಿಲ್ಲಿಸಿಕೊಂಡು ಹಿಂಡಿಹಿಪ್ಪೆ ಮಾಡಲಿರುವ ಸಿಪಿಎಂನ ರಹಸ್ಯ ನಡೆಯನ್ನು ಪೈವಳಿಕೆಯಲ್ಲಿ ಸಿಪಿಐ ವಿರೋಧಿಸಿದೆ.  ಈ ಹಿನ್ನೆಲೆ ಯಲ್ಲಿ ನವಂಬರ್ ನಾಲ್ಕರಂದು ನಡೆಯುವ ಪೈವಳಿಕೆ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಪರಸ್ಪರ ಸ್ಪರ್ಧಿಸಲು  ಸಹೋದರರು ತೀರ್ಮಾನಿಸಿದ್ದಾರೆ.

ಚುನಾವಣೆಗೆ ನಾಮಪತ್ರಿಕೆ ಹಿಂತೆಗೆಯಬೇಕಾಗಿದ್ದ ನಿನ್ನೆ ಸಂಜೆ ಎರಡು ಪಕ್ಷಗಳು ತಾವು ನೀಡಿದ ನಾಮಪತ್ರಿಕೆ ಹಿಂತೆಗೆಯಲಿಲ್ಲ.  ಸಹಕಾರಿ  ಬ್ಯಾಂಕ್ ಚುನಾವಣೆಯಲ್ಲಿ ಈಗಿರುವ ಸ್ಥಿತಿಯನ್ನು ಮುಂದುವರಿಸ ಬೇಕೆಂದಾಗಿದೆ ಎಡರಂಗದ  ಜಿಲ್ಲಾ ನೇತೃತ್ವ ದೃಢವಾಗಿ ತಿಳಿಸಿದೆ. ಕಳೆದ ಚುನಾವಣೆಯ ಬಳಿಕ ಸಿಪಿಎಂನೊಂ ದಿಗಿರುವ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್‌ನಲ್ಲಿ ಪೈವಳಿಕೆ ಬ್ಯಾಂಕ್ ಚುನಾವಣೆ ಮೈತ್ರಿಯನ್ನು ಸಿಪಿಎಂಗೂ ತಳ್ಳಬೇಕಾಗಿ ಬರಲಿದೆ. ಆ ಮೂಲಕ ಆ ಪಕ್ಷಗಳ ಭಿನ್ನತೆಯನ್ನು ಹೆಚ್ಚಿಸಿ ಒಂದೊಂದು  ವಿಭಾಗವನ್ನು ಜೊತೆಗೆ ಇರಿಸಿಕೊಳ್ಳಲು ಯತ್ನ ನಡೆಯುತ್ತಿದೆಯೆನ್ನಲಾಗಿದೆ. ಪರಸ್ಪರ ಕೋಪ ಹೊಂದಿದ್ದರೂ ಈ ರೀತಿಯ ಶಂಕೆಗಳಿಗೆ ಕಾರಣವಾಗ ಬಹುದಾದ ರೀತಿಯಲ್ಲಿ ಎರಡೂ ಒಕ್ಕೂಟಗಳು ಅಭ್ಯರ್ಥಿಗಳನ್ನು ರಂಗಕ್ಕಿಳಿಸಿದೆ.

೧೧ ಮಂದಿ ಸದಸ್ಯರ ಬ್ಯಾಂಕ್ ಆಡಳಿತ ಸಮಿತಿಗೆ  ಸಿಪಿಎಂ ಒಕ್ಕೂಟದಲ್ಲಿ ಸಿಪಿಎಂಗೆ ೫, ಕಾಂಗ್ರೆಸ್‌ಗೆ ೨, ಲೀಗ್‌ಗೆ ೪ ಉಮೇದ್ವಾರರಿದ್ದಾರೆ. ಪ್ರತಿಸ್ಪರ್ಧಿಯಾಗಿ ಸಿಪಿಐ ಆರು ಕಡೆ ಸ್ಪರ್ಧಿಸಲಿದೆ. ಬಿಜೆಪಿಯ ೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈಗಿನ ಆಡಳಿತ ಸಮಿತಿಯಲ್ಲಿ ಸಿಪಿಐಗೆ ೪, ಸಿಪಿಎಂಗೆ ಇಬ್ಬರು,  ಲೀಗ್‌ಗೆ ಮೂರು, ಕಾಂಗ್ರೆಸ್‌ಗೆ ಇಬ್ಬರು ನಿರ್ದೇಶಕರಿದ್ದಾರೆ.  ಸಹಕಾರಿ ಬ್ಯಾಂಕ್‌ಗಳಲ್ಲಿ ಈಗಿನ ಸ್ಥಿತಿಯೇ ಮುಂದುವರಿಯಬೇಕೆಂದು ಸಿಪಿಎಂ ಹಾಗೂ ಎಡಪಕ್ಷಗಳ ನಿಲುವು ಎಂದು ಎಡರಂಗದ ಜಿಲ್ಲಾ ಏಕೋಪನ ಸಮಿತಿ ಸಂಚಾಲಕ ಕೆ.ಪಿ. ಸತೀಶ್ಚಂದ್ರನ್ ಎಲ್ಲಾ ವಿಭಾಗದವರಿಗೂ ತಿಳಿಸಿದ್ದರು.

ಎಡರಂಗದ ನಿಲುವು ಈ ರೀತಿಯಲ್ಲಿರುವಾಗ ಪೈವಳಿಕೆಯಲ್ಲಿ ನಾಲ್ಕು ನಿರ್ದೇಶಕರಿರುವ ಸಿಪಿಐಗೆ ನವಂಬರ್ ೪ರಂದು ನಡೆಯುವ ಚುನಾವಣೆಯಲ್ಲಿ ಎರಡು ಸೀಟು ನೀಡುವುದಾಗಿ ಸಿಪಿಎಂನ  ಅಭಿಪ್ರಾಯ ಸಿಪಿಐಗೆ ರೋಷ ತಂದಿದೆ. ಬಳಿಕ ನಡೆದ ಚರ್ಚೆಯಲ್ಲಿ  ಅಧ್ಯಕ್ಷರ ಹುದ್ದೆ ಸಿಪಿಐಗೆ ನೀಡಬೇಕೆಂದೂ ಮೂರು ಸ್ಥಾನ ಸಿಪಿಐಗೆ ಬೇಕೆಂದೂ ಸಿಪಿಐ ಹಠ ಹಿಡಿದಿದೆ.  ಎಡರಂಗದ ಪ್ರಮುಖ ಅಂಗಪಕ್ಷಗಳಾದ ಸಿಪಿಎಂ, ಸಿಪಿಐಗಳೆರಡು ಪೈವಳಿಕೆಯಲ್ಲಿ ಈ ವಿಷಯದಲ್ಲಿ ಭಿನ್ನ ನಿಲುವು ಹೊಂದಿವೆ. ಹಲವಾರು ವರ್ಷಗಳ ಹಿಂದೆ ಸ್ಥಾಪಿಸಿದ ಸಹಕಾರಿ ಬ್ಯಾಂಕ್ ಅಂದಿನಿಂದ ಕಳೆದ ಚುನಾವಣೆವರೆಗೆ ಸಿಪಿಐಯ ನಿಯಂತ್ರಣದಲ್ಲಿದೆ.

Leave a Reply

Your email address will not be published. Required fields are marked *

You cannot copy content of this page