ಪೈವಳಿಕೆ ಸಹೋದರರ ಹುತಾತ್ಮ ದಿನಾಚರಣೆ ನಾಳೆ: ಯಶಸ್ವಿಗೆ ಸಮಿತಿ ರೂಪೀಕರಣ
ಪೈವಳಿಕೆ: ಪೈವಳಿಕೆಯ ಸುಂದರ ಶೆಟ್ಟಿ, ಮಹಾಬಲ ಶೆಟ್ಟಿ, ಚೆನ್ನಪ್ಪ ಶೆಟ್ಟಿ ಸಹೋದರರ ಹುತಾತ್ಮ ದಿನಾಚರಣೆ ನಾಳೆ ನಡೆಯಲಿದೆ. ಸೆಪ್ಟಂಬರ್ ೩ರಂದು ಸಿಪಿಎಂನ ಹಿರಿಯ ಮುಖಂಡ ಎ. ಅಬೂಬಕ್ಕರ್ರವರ ದ್ವಿತೀಯ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದ್ದು, ಇದರ ಯಶಸ್ವಿಗಾಗಿ ೧೦೧ ಮಂದಿಯ ಸ್ವಾಗತ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ರಜಾಕ್ ಚಿಪ್ಪಾರು, ಉಪಾಧ್ಯಕ್ಷರಾಗಿ ಹಾರೀಸ್ ಪೈವಳಿಕೆ, ವಿನಯ ಕುಮಾರ್ ಬಾಯಾರು, ಪುರುಷೋತ್ತಮ ಬಳ್ಳೂರು, ಅಶೋಕ ಭಂಡಾರಿ, ಸಂಚಾಲಕರಾಗಿ ಚಂದ್ರ ನಾಯ್ಕ್ ಮಾನಿಪ್ಪಾಡಿ, ಜೊತೆ ಸಂಚಾಲಕರಾಗಿ ಅಬ್ದುಲ್ ಕೆ., ಶ್ರೀನಿವಾಸ ಭಂಡಾರಿ, ನಾರಾಯಣ ಶೆಟ್ಟಿ ಕೆ., ಸೀತಾರಾಮ ಶೆಟ್ಟಿ, ಜಯಂತಿ ಕೆ., ಹುಸೈನ್ ಮಾಸ್ತರ್, ಗೌರವಾಧ್ಯಕ್ಷರಾಗಿ ನಾರಾಯಣ ಶೆಟ್ಟಿ ಕಳಾಯಿ, ಬಿ.ಎ. ಖಾದರ್, ಅಬ್ದುಲ್ ಸತ್ತಾರ್, ಅಬ್ದುಲ್ಲ ಮೊದಲಾದವರು ಆಯ್ಕೆಯಾದರು.
ನಾಳೆ ಬೆಳಿಗ್ಗೆ ಬೋಳಂಗಳದಲ್ಲಿರುವ ಹುತಾತ್ಮರ ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ, ಸಂಜೆ ಪೈವಳಿಕೆಯಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು, ಸಿಪಿಎಂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಬಿಜು ಉದ್ಘಾಟಿಸುವರು. ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ.ವಿ. ಕುಂಞಿರಾಮನ್, ಜಿಲ್ಲಾ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಭಾಗವಹಿಸುವರು.