ಪೊಲೀಸ್‌ನ ಬೈಕ್ ಕಳವು

ಕಾಸರಗೋಡು: ಪೊಲೀಸ್ ಸಿಬ್ಬಂದಿಯ ಬೈಕ್ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಆಲಪ್ಪಡಂಚಾಲ್ ಎಂಬಲ್ಲಿನ ರತೀಶ್‌ರ ಬೈಕ್ ಕಳವೀಗೀಡಾಗಿದೆ. ಈ ತಿಂಗಳ 13ರಂದು ಕರ್ತವ್ಯ  ನಿಮಿತ್ತ ಮಂಜೇಶ್ವರಕ್ಕೆ ತೆರಳುತ್ತಿದ್ದಾಗ ಬೈಕ್‌ನ್ನು ಚೆರುವತ್ತೂರು ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಲಾಗಿತ್ತು. 14ರಂದು ಮರಳಿ ಚೆರುವತ್ತೂರಿಗೆ ತೆರಳಿದಾಗ  ಬೈಕ್ ಕಳವಿಗೀಡಾದ ವಿಷಯ ತಿಳಿದು ಬಂದಿದೆ ಎನ್ನಲಾಗಿದೆ. ಈ ಬಗ್ಗೆ ರತೀಶ್ ನೀಡಿದ ದೂರಿನಂತೆ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page