ಪೊಲೀಸ್ ಇಲಾಖೆಯ ಡಿ ಡಾಟ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹೆಚ್ಚಿನವರು 14ರಿಂದ 17ರ ಮಧ್ಯೆ ಪ್ರಾಯದವರು
ಕಾಸರಗೋಡು: ಆನ್‌ಲೈನ್ ಗೇಮ್ಸ್ ನವ ಮಾಧ್ಯಮಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿ ದೈನಂದಿನ ಅದನ್ನೇ ವೀಕ್ಷಿಸಿ ಬಳಿಕ ಅದರ ದಾಸರನ್ನಾಗಿಸುವ ಮಕ್ಕಳನ್ನು ಅದರಿಂದ ಮುಕ್ತಗೊಳಿಸಲು ಪೊಲೀಸ್ ಇಲಾಖೆ ಆರಂಭಿಸಿರುವ ಡಿ ಡಾಟ್ (ಡಿಜಿಟಲ್ ಡಿ ಅಡಿಕ್ಷನ್ ಸೆಂಟರ್)ಗಳಲ್ಲಿ ಚಿಕಿತ್ಸೆ ಪಡೆಯುತ್ತಿರು ವವರಲ್ಲಿ ಹೆಚ್ಚಿನವರು 14ರಿಂದ 17ರ ಮಧ್ಯೆ ಪ್ರಾಯದವರಾಗಿದ್ದಾರೆ. ಇದರಲ್ಲಿ ಗಂಡು ಹಾಗೂ ಹೆಣ್ಮಕ್ಕಳೂ ಒಳಗೊಂಡಿದ್ದಾರೆ.
ಮೊಬೈಲ್ ಫೋನ್ ಮೂಲಕ ಆನ್‌ಲೈನ್ ಗೇಮ್ಸ್ ಇತ್ಯಾದಿಗಳನ್ನು ನಿರಂತರವಾಗಿ ವೀಕ್ಷಿಸುವ ಮಕ್ಕಳಲ್ಲಿ ಮಾನಸಿಕ ಹಾಗೂ ದೈಹಿಕ ಪರಿಣಾ ಮಗಳು ಬೀರುತ್ತವೆ. ಅವರ ನಡವಳಿ ಕೆಗಳಲ್ಲಿ ಬದಲಾವಣೆ ಗೋಚರಿಸು ತ್ತದೆ. ಕಲಿಕೆಯಲ್ಲಿ ಇವರು ನಿರಾಸಕ್ತಿ ತೋರುತ್ತಾರೆ. ಇವರಲ್ಲಿ ನಿದ್ರೆ ಸಮಸ್ಯೆಗಳು ಉಂಟಾಗುತ್ತವೆ. ಇಂತಹ ಮಕ್ಕಳಿಗೆ ಡಿ ಡಾಟ್ ಕೇಂದ್ರದ ಮೂಲಕ ಚಿಕಿತ್ಸೆ ನೀಡಿ ಡಿಜಿಟಲ್ ವೀಕ್ಷಣಾ ವ್ಯಸನದಿಂದ ಮುಕ್ತಗೊಳಿಸ ಲಾಗುತ್ತದೆ.
ಮಾನಸಿಕ ರೋಗ ತಜ್ಞರು ಹಾಗೂ ಥೆರಫಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಮಾನಸಿಕ ಆರೋಗ್ಯ ಸಂಸ್ಥೆಗಳು, ಸ್ವಯಂ ಸೇವಾ ಸಂಘಟನೆಗಳು ಹಾಗೂ ಸೈಬರ್ ಪೊಲೀಸ್ ವಿಭಾಗದ ಸಹಕಾರವೂ ಇದಕ್ಕೆ ಲಭಿಸುತ್ತಿದೆ.