ಪೊಲೀಸ್ ಠಾಣೆಗಳಲ್ಲಿ ಠಾಣಾಧಿಕಾರಿ ಹೊಣೆಗಾರಿಕೆ ಮತ್ತೆ ಎಸ್‌ಐಗಳಿಗೆ

ಕಾಸರಗೋಡು: ರಾಜ್ಯದ ಪೊಲೀಸ್ ಠಾಣೆಗಳ ಠಾಣಾಧಿಕಾ ರಿಗಳ ಹೊಣೆಗಾರಿಕೆಯನ್ನು ವರ್ಷಗಳ ಹಿಂದೆ ಇದ್ದ ಅದೇ ರೀತಿಯಲ್ಲಿ ಮತ್ತೆ ಸಬ್ ಇನ್‌ಸ್ಪೆಕ್ಟರ್ (ಎಸ್‌ಐ)ಗಳಿಗೆ ವಹಿಸಿಕೊಡಲಾಗುವುದು.

ವರ್ಷಗಳ ಹಿಂದೆ ಪೊಲೀಸ್ ಠಾಣೆಗಳ ಠಾಣಾಧಿಕಾರಿ (ಸ್ಟೇಷನ್ ಹೌಸ್ ಆಫೀಸರ್) ಹೊಣೆಗಾರಿಕೆ ಎಸ್‌ಐಗಳು ನಿರ್ವವಹಿಸುತ್ತಿದ್ದರು. ಆದರೆ ಲೋಕನಾಥ್ ಬೆಹ್ರಾ ಅವರನ್ನು   ರಾಜ್ಯದ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ)ರಾಗಿ ನೇಮಕ ಗೊಂಡ ನಂತರ ಅವರು ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳ ಹೊಣೆಗಾರಿಕೆಯ ಎಸ್‌ಐಗಳನ್ನು  ಹೊರತುಪಡಿಸಿ ಇನ್‌ಸ್ಪೆಕ್ಟರ್ (ಐಪಿ)ಗಳಿಗೆ ವಹಿಸಿಕೊಟ್ಟಿ ದ್ದರು. ಲೋಕನಾಥ್ ಬೆಹ್ರಾ ಇತ್ತೀಚೆಗೆ ಪೊಲೀಸ್ ಸೇವೆಯಿಂದ ನಿವೃತ್ತರಾದ ಬಳಿಕ ಅನಿಲ್‌ಕಾಂತ್‌ರನ್ನು ಡಿಜಿಪಿ ಯಾಗಿ ಸರಕಾರ ನೇಮಿಸಿತ್ತು. ಅವರೂ ಪೊಲೀಸ್ ಸೇವೆಯಿಂದ ನಿವೃತ್ತರಾದ ನಂತರ ಈ ಹಿಂದೆ ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಡಾ. ಶೇಖ್ ದರ್ವೇಶ್ ಸಾಹೀಬ್ ರನ್ನು ತಿಂಗಳ ಹಿಂದೆಯಷ್ಟೇ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರನ್ನಾಗಿ ಸರಕಾರ ನೇಮಿಸಿದ್ದು, ಅವರು ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಹಲವು ಮಹತ್ತರ ಬದಲಾವಣೆಗಳನ್ನು ತರ ತೊಡಗಿದ್ದಾರೆ.

ಪೊಲೀಸ್ ಠಾಣೆಗಳ ಠಾಣಾಧಿಕಾರಿ ಹೊಣೆಗಾರಿಕೆಯನ್ನು ಇನ್‌ಸ್ಪೆಕ್ಟರ್‌ಗಳಿಗೆ ವಹಿಸಿಕೊಟ್ಟರೂ ಅದರಿಂದ ನಿರೀಕ್ಷಿತ ಫಲ ಉಂಟಾಗಿಲ್ಲ ಮಾತ್ರವಲ್ಲ ಅದು ಯಶಸ್ಸೂ ಕಂಡಿಲ್ಲವೆಂದು ಆ ಬಗ್ಗೆ ಡಿಜಿಪಿ ಕೆ. ಪದ್ಮಕುಮಾರ್‌ರ ನೇತೃತ್ವದ ಸಮಿತಿ ನಡೆಸಿದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಆ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಅದು ಈಗ ಸರಕಾರದ ಪರಿಶೀಲನೆಯಲ್ಲಿದೆ. ಈ ವರದಿಗೆ ಸರಕಾರದ ಅಂಗೀಕಾರ ಲಭಿಸಿದಲ್ಲಿ ಈಗ ಇನ್‌ಸ್ಪೆಕ್ಟರ್‌ಗಳು ಠಾಣಾಧಿಕಾರಿ ಯಾಗಿರುವ ರಾಜ್ಯದ ಮೂರರಲ್ಲಿ ಒಂದು ಪಾಲು ಠಾಣೆಗಳ  ಠಾಣಾಧಿಕಾರಿ ಹೊಣೆಗಾರಿಕೆ ಮತ್ತೆ ಎಸ್‌ಐಗಳಿಗೆ ಹೋಗಿ ಸೇರಲಿದೆ.

ಅತೀ ಕಡಿಮೆ ಪ್ರಕರಣಗಳು ದಾಖಲುಗೊ ಳ್ಳುತ್ತಿರುವ ಪೊಲೀಸ್ ಠಾಣೆಗಳ ಠಾಣಾಧಿಕಾರಿ ಹೊಣೆಗಾರಿಕೆಗಳನ್ನು  ಮಾತ್ರವೇ ಮುಂದೆ   ಎಸ್‌ಐಗಳಿಗೆ ವಹಿಸಿಕೊಡ ಲಾಗುವುದು. ರಾಜ್ಯದ ೪೭೮ ಪೊಲೀಸ್ ಠಾಣೆಗಳ ಠಾಣಾಧಿಕಾರಿ ಗಳು ಈಗ ಇನ್‌ಸ್ಪೆಕ್ಟರ್‌ಗಳಾಗಿದ್ದಾರೆ. ಅದು ಶೀಘ್ರ ಬದಲಾಗಲಿದೆ.  ಅತೀ ಹೆಚ್ಚು ಪ್ರಕರಣಗಳು ದಾಖಲುಗೊ ಳ್ಳುತ್ತಿರುವ  ಠಾಣೆಗಳ ಠಾಣಾಧಿಕಾರ ಹೊಣೆಗಾರಿಕೆಯಲ್ಲಿ ಇನ್‌ಸ್ಪೆಕ್ಟರ್‌ಗಳನ್ನು ಇನ್ನೂ ಖಾಯಂ ಆಗಿ ಮುಂದಿರಿಸಲಾ ಗುವುದು.  ಠಾಣಾಧಿಕಾರಿಗಳಾಗಿ ಇನ್ ಸ್ಪೆಕ್ಟರ್‌ಗಳನ್ನು ನೇಮಕಾತಿಗೊಳಿಸಿದ ಬಳಿಕ ಅದು ಅವರಿಗೆ  ಪ್ರಕರಣಗಳ ತನಿಖೆಗಾಗಿ ಅಗತ್ಯದ ಸಮಯಾ ವಕಾಶ ಲಭಿಸದಂತೆ ಮಾಡತೊಡಗಿದೆ. ಇದರಿದಾಗಿ   ಹಲವು ಗಂಭೀರ ಪ್ರಕರಣಗಳ ತನಿಖೆಗಳೂ ವಿಳಂಬಗೊಳಿಸುವಂತೆಯೂ ಮಾಡಿದೆ. ಮಾತ್ರವಲ್ಲ ಇದು ಭಾರೀ ಆಕ್ಷೇಪಗಳು ತಲೆಯೆತ್ತುವಂತೆಯೂ ಮಾಡಿದೆ. ಆ ಹಿನ್ನೆಲೆಯಲ್ಲಿ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸುವ ಹೊಣೆಗಾರಿಕೆಯನ್ನು ಸರಕಾರ ಡಿಜಿಪಿ ಪದ್ಮಕುಮಾರ್ ನೇತೃತ್ವದ ಸಮಿತಿಗೆ ವಹಿಸಿಕೊಟ್ಟಿತ್ತು.  ಅದರಂತೆ ಸಮಿತಿ ಅಧ್ಯಯನ ನಡೆಸಿ ಆ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಇನ್ನು ಆ ವರದಿ ಮೇಲೆ ಸರಕಾರ ತಳೆಯುವ ನಿಲುವು ಮುಂದಿನ ಕ್ರಮದ ಮೇಲೆ ಅವಲಂಬಿತವಾಗಲಿದೆ.

Leave a Reply

Your email address will not be published. Required fields are marked *

You cannot copy content of this page