ಪೊಲೀಸ್ ಪೆನ್ಶನರ್ಸ್ ಸಂಘಟನೆಯ ಹಿತ್ತಿಲಿನಿಂದ ಮೋಟಾರ್, ಪೈಪ್ ಕಳವು

ಕಾಸರಗೋಡು: ಮಧೂರು ಪಂಚಾಯತ್‌ನ ಮಂಗಲಮೂಲೆ ಯಲ್ಲಿರುವ ಕೇರಳ ಪೊಲೀಸ್ ಪೆನ್ಶನರ್ಸ್ ಅಸೋಸಿಯೇ ಷನ್‌ನ ಹಿತ್ತಿಲ ಕೊಳವೆ ಬಾವಿಯ ಮೋಟಾರು ಮತ್ತು ಪೈಪ್‌ಗಳನ್ನು ಕಳವುಗೈಯ್ಯ ಲಾಗಿದೆ. ಈ ಬಗ್ಗೆ ಅಸೋಸಿಯೇ ಷನ್‌ನ ಅಧ್ಯಕ್ಷ ಶ್ರೀಧರನ್ ಎಂ. ನೀಡಿದ ದೂರಿನಂತೆ  ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಈ  ಕೊಳವೆ ಬಾವಿ ಮೋ ಟರ್‌ನ ಮೀಟರ್ ಬಾಕ್ಸ್‌ನ್ನು ಒಡೆದು ಹಾಕಲಾಗಿದೆಯೆಂದು ಮೇ 7ರಂದು ಸಂಜೆ ಮತ್ತು ನಿನ್ನೆ ಬೆಳಿಗ್ಗೆಯ ಸಮಯದೊಳಗಾಗಿ ಈ ಕಳವು ನಡೆದಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page