ಪೋಕ್ಸೋ ಪ್ರಕರಣದ ಸಂತ್ರಸ್ತೆಯ ಫೋಟೋ ಪ್ರಕಟಿಸಿದುದರ ವಿರುದ್ಧ ಕೇಸು ದಾಖಲು
ಬದಿಯಡ್ಕ: ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯಾದ ಬಾಲಕಿಯ ಭಾವಚಿತ್ರ ಹಾಗೂ ಪೂರ್ಣ ಮಾಹಿತಿಗಳನ್ನು ಪ್ರಕಟಿಸಿದ ಸಂಜೆ ಪತ್ರಿಕೆ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಕಾಸರಗೋಡಿನಿಂದ ಪ್ರಕಟವಾಗುವ ಪತ್ರಿಕೆಯ (ಕಾರವಲ್ ಅಲ್ಲ) ವಿರುದ್ಧ ಪೊಲೀಸರು ಸ್ವಯಂ ಕೇಸು ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಸಂತ್ರಸ್ತೆಯಾದ ಬಾಲಕಿಯ ಭಾವಚಿತ್ರ ಹಾಗೂ ಆಕೆಯನ್ನು ಗುರುತು ಹಚ್ಚಬಹುದಾದ ಮಾಹಿತಿಗಳನ್ನು ಪ್ರಕಟಿಸಲಾಯಿತೆಂಬುದಕ್ಕೆ ಸಂಬಂಧಿಸಿ ಗುಪ್ತಚರ ವಿಭಾಗ ನೀಡಿದ ವರದಿಯ ಆಧಾರದಲ್ಲಿ ಕೇಸು ದಾಖಲಿಸಲಾಗಿದೆ.