ಪ್ರಗತಿಪರ ಕೃಷಿಕ ನಿಧನ
ಪೈವಳಿಕೆ: ಕಯ್ಯಾರು ಬಳಿಯ ಕೊಂದಲಕ್ಕಾಡು ನಿವಾಸಿ ಕರ್ನೆಲ್ ಕ್ರಾಸ್ತ (83) ನಿನ್ನೆ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯ ಲ್ಲಿದ್ದರು. ಪ್ರಗತಿಪರ ಕೃಷಿಕರಾ ಗಿದ್ದ ಇವರು ಪೈವಳಿಕೆ ಪಂ.ಸಹಿತ ವಿವಿಧ ಕಡೆಗಳಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದರು. ಮೃತರು ಪತ್ನಿ ಲೂಸಿ ಕ್ರಾಸ್ತ, ಮಕ್ಕಳಾದ ಐರಿನ್ ರೋಷಿ ಕ್ರಾಸ್ತ, ಜೋನ್ ಕ್ರಾಸ್ತ, ರೊನಾಲ್ಡ್ ಕ್ರಾಸ್ತ, ಪತ್ರಕರ್ತ ಸ್ಟೀಫನ್ ಕ್ರಾಸ್ತ ಕಯ್ಯಾರ್, ಲವೀನ ಫೆಲ್ಸಿ, ಅಳಿಯಂದಿರಾದ ಹಿರಿಯ ಪತ್ರಕರ್ತ ಹಿಲರಿ ಕ್ರಾಸ್ತ, ವಿಜಯ್ ಕ್ರಾಸ್ತ, ಸೊಸೆಯಂ ದಿರಾದ ಮರಿಯ ಸುಜಿ, ಅನಿತಾ ಕ್ರಾಸ್ತ, ಸಹೋದರ, ಸಹೋದರಿಯರಾದ ಸಿಸಿಲಿಯ ಕ್ರಾಸ್ತ, ಫೌಲ್ ಕ್ರಾಸ್ತ, ಪೌಲಿನ್ ಕ್ರಾಸ್ತ,ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.