ಪ್ರಧಾನಮಂತ್ರಿ ಅನ್ನಯೋಜನೆ ೨೦೨೮ವರೆಗೆ ವಿಸ್ತರಣೆ

ಹೊಸದಿಲ್ಲಿ: ಭಾರತದ ೮೦ ಕೋಟಿಗೂ ಹೆಚ್ಚು ಹೆಚ್ಚು ಮಂದಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಮುಂದಿನ ಐದು ವರ್ಷಕ್ಕೆ ವಿಸ್ತರಿಸಲಾಗಿದೆ. ೨೦೨೮ ಡಿಸೆಂಬರ್ ೩೧ರವರೆಗೆ ಈ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸರಕಾರ  ನಿರ್ಧರಿಸಿದೆ. ಇದಕ್ಕಾಗಿ ೧೦ ಲಕ್ಷ ಕೋಟಿ ರೂಪಾಯಿ ಖರ್ಚು ತಗಲಿದೆ. ಈ ಯೋಜನೆಗೆ ಪ್ರತಿ ವರ್ಷ ೨ ಲಕ್ಷ ಕೋಟಿಗೂ ಹೆಚ್ಚು ಮೊತ್ತ ಬೇಕಾಗುತ್ತಿದೆ. ೨೦೨೦ರಲ್ಲಿ ಕೋವಿಡ್ ಸಂದಿಗ್ಧತೆ ಕಾಲದಲ್ಲಿ ಜನರನ್ನು ಉಪವಾಸದಿಂದ ಪಾರು ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಯೋಜನೆಯನ್ನು ಜ್ಯಾರಿಗೆ ತಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page