ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೆ ಕೇರಳ ಭೇಟಿ: ಮಾರ್ಚ್ 15ರಂದು ಪಾಲ್ಘಾಟ್, 17ರಂದು ಪತ್ತನಂತಿಟ್ಟದಲ್ಲಿ ಚುನಾವಣಾ ರ‍್ಯಾಲಿ

ತಿರುವನಂತಪುರ:? ಲೋಕಸಭಾ ಚುನಾವಣೆಯಲ್ಲಿ ಈಬಾರಿ ಹೇಗಾದರೂ ಮಾಡಿ ಕೇರಳದಲ್ಲಿ ಗೆಲುವು ಸಾಧಿಸಿಯೇ ಸಿದ್ಧ ಎಂಬ ಛಲದೊಂದಿಗೆ ಮುಂದಕ್ಕೆ ಸಾಗುತ್ತಿರುವ ಬಿಜೆಪಿ ಇನ್ನಷ್ಟು ಮತದಾರರನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಯವರು  ಈ ತಿಂಗಳ ೧೫ರಂದು ರಾಜ್ಯಕ್ಕೆ ಆಗಮಿಸುವರು. ಮಾರ್ಚ್ ೧೭ರ ತನಕ ರಾಜ್ಯದಲ್ಲಿ ತಂಗಲಿರುವ ಪ್ರಧಾನಮಂತ್ರಿ ಮಾರ್ಚ್ ೧೫ರಂದು ಪಾಲ್ಘಾಟ್‌ನಲ್ಲಿ ನಡೆಯುವ  ಎನ್‌ಡಿಎಯ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸುವರು. ಮಾತ್ರವಲ್ಲದೆ ಅಂದು ಪಾಲ್ಘಾಟ್ ನಗರದಲ್ಲಿ ನಡೆಯುವ ಮೆಘಾ ರೋಡ್ ಶೋದಲ್ಲೂ ಭಾಗವಹಿಸುವರು.

ಮಾ.೧೭ರಂದು ಮೋದಿಯವರು ಪತ್ತನಂತಿಟ್ಟದಲ್ಲೂ ಎನ್‌ಡಿಎಯ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿ ಸುವರು. ಇದರ ಹೊರತಾಗಿ ಈ ಎರಡೂ ದಿನಗಳಲ್ಲಾಗಿ ಅವರು ರಾಜ್ಯದಲ್ಲಿ ಇತರ ವಿವಿಧ ಕಾರ್ಯಕ್ರ ಮಗಳಲ್ಲೂ ಭಾಗವಹಿಸುವರು.  ಪಾಲ್ಘಾಟ್ ಮತ್ತು ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದಲ್ಲೂ ಈ ಬಾರಿ ಬಿಜೆಪಿ ಭಾರೀ ಗೆಲುವಿನ ನಿರೀಕ್ಷೆ ಇರಿಸಿಕೊಂಡಿದೆ. ಕಾಂಗ್ರೆಸ್‌ನ ಹಿರಿ ನೇತಾರ ಎ.ಕೆ. ಆಂಟನಿಯವರ ಪುತ್ರ ಅನಿಲ್ ಆಂಟನಿ ಈ ಕ್ಷೇತ್ರದಲ್ಲಿ ಎನ್‌ಡಿಎ ಉಮೇದ್ವಾರರಾಗಿ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಇತ್ತೀಚೆಗಷ್ಟೇ ತನ್ನ ಜನಪಕ್ಷಂವನ್ನು  ಬಿಜೆಪಿಯೊಂದಿಗೆ ಪೂರ್ಣವಾಗಿ ವಿಲೀನಗೊಳಿಸಿ ಬಿಜೆಪಿ ಸೇರಿರುವ ಪಿ.ಸಿ. ಜೋರ್ಜ್‌ರನ್ನು ಅಭ್ಯರ್ಥಿ ಯನ್ನಾಗಿಸಲು  ಬಿಜೆಪಿ ತೀರ್ಮಾನಿಸಿತ್ತು.  ಆದರೆ ಪಿ.ಸಿ. ಜೋರ್ಡ್‌ರ ವಿರುದ್ಧ ಎನ್‌ಡಿಎ ಘಟಕ ಪಕ್ಷವಾದ ಬಿಡಿಜೆಎಸ್ ಕೆಲವೊಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಪಿ.ಸಿ. ಜೋರ್ಜ್‌ರನ್ನು ಕೈಬಿಟ್ಟು ಅನಿಲ್ ಆಂಟನಿಯವರಿಗೆ ಬಿಜೆಪಿ ಈ ಕ್ಷೇತ್ರದಲ್ಲಿ ಟಿಕೆಟ್ ನೀಡಿತ್ತು. ಇದು ಪಿ.ಸಿ. ಜೋರ್ಜ್ ಮತ್ತು  ಅವರ ಬೆಂಬಲಿಗರನ್ನು ನಿರಾಸೆಗೊಳಿಸಿದೆ. ಆದ್ದರಿಂದ ಅಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೂ ಪ್ರಧಾನಮಂತ್ರಿ ಮೋದಿ ಪತ್ತನಂತಿಟ್ಟಕ್ಕೆ ಸಂದರ್ಶಸಲಿ ರುವ ಹಿಂದಿನ ಇನ್ನೊಂದು ಉದ್ದೇಶ ವಾಗಿದೆಯೆಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page